ಕುಂಬಳೆ: ಮುಳ್ಳೇರಿಯ ಮಂಡಲ ಮಾತೃ ವಿಭಾಗದ ನೇತೃತ್ವದಲ್ಲಿ ಶ್ರೀಲಕ್ಷ್ಮೀ ನೃಸಿಂಹ ಕರಾವಲಂಬ ಸ್ತೋತ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಕುಂಬಳೆ ವಲಯ ಮಾತೃ ವಿಭಾಗದ ಆಶ್ರಯದಲ್ಲಿ ಶಾಂತಿಪಳ್ಳದಲ್ಲಿರುವ ಗುರುಮೂರ್ತಿ ಇವರ ನಿವಾಸ "ಅಭಿರಾಮ" ದಲ್ಲಿ ಇತ್ತೀಚೆಗೆ ಪ್ರಾರಂಭವಾಯಿತು.
ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬಳೆ ವಲಯ ಶಾಂತಿ ಪಳ್ಳ ಘಟಕ ಗುರಿಕ್ಕಾರರಾದ ಗುರುಮೂರ್ತಿ ಸ್ವಾಗತಿಸಿ, ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ವಂದಿಸಿದರು. ಡಿ ಪಿ ಭಟ್, ಕೇಶವಪ್ರಸಾದ ಎಡಕ್ಕಾನ, ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ, ವಲಯ ಮಾತೃ ವಿಭಾಗದ ಕೃಷ್ಣ ಕುಮಾರಿ, ವಲಯ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು.