ಕಾಸರಗೋಡು: ಜಿಲ್ಲಾ ಗ್ರಂಥಾಲಯ, ಭಾಷಾ ಅಲ್ಪಸಂಖ್ಯಾತರ ಕಾರ್ನರ್ ಜಂಟಿ ವತಿಯಿಂದ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಇಂದು(ಜೂ.8) ಮತ್ತು ನಾಳೆ(ಜೂ.9) ಬಹುಭಾಷಾ ಸಾಹಿತ್ಯೋತ್ಸವ ನಡೆಯಲಿದೆ.
ನಾಳೆ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕ ಪ್ರಸನ್ನ ಸಾಹಿತ್ಯೋತ್ಸವ ಉದ್ಘಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ರಾಜ್ಯ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ನ್ಯಾಯವಾದಿ ಪಿ.ಅಪ್ಪುಕುಟ್ಟನ್ ಮುಖ್ಯ ಅತಿಥಿಯಾಗಿರುವರು. ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಕನ್ನಡ ಸಾಹಿತ್ಯ ಪರಿಷತ್ ಕೇರಳಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ವಿವಿಧ ವಲಯಗಳ ಗಣ್ಯರಾದ ಎಂ.ಶಂಕರ ರೈ ಮಾಸ್ಟರ್, ಡಾ.ಪಿ.ಪ್ರಭಾಕರ್, ಯು.ಜನಾರ್ದನ್, ಯು.ಶ್ಯಾಮಭಟ್ ಮೊದಲಾದವರು ಉಪಸ್ಥಿತರಿರುವರು.
ಈ ಸಂದರ್ಭ ಡಾ.ವೆಂಕಟರಾಜ ಪುಣಿಂಚಿತ್ತಾಯ, ಕೆದಂಬಾಡಿ ಜತ್ತಪ್ಪ ರೈ, ಹಮೀದಾಲಿ ಷಂನಾಡ್ ಮೊದಲಾದವರ ಸಂಸ್ಮರಣೆ ನಡೆಯಲಿದೆ.
ನಾಳೆ(ಜೂ.9) ಬಹು ಭಾಷಾ ಸಾಹಿತ್ಯ ಸಂಗಮ ಕಾರ್ಯಕ್ರಮನಡೆಯಲಿದೆ. ಡಾ.ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆ ವಹಿಸುವರು. ಉಮೇಶ್ ಎಂ.ಸಾಲಿಯಾನ್, ಶಂಕರ ಸ್ವಾಮಿ ಕೃಪಾ, ಡಾ.ಎ.ಎಂ.ಶ್ರೀಧರನ್ ಮೊದಲಾದವರು ಉಪಸ್ಥಿತರಿರುವರು. "ಜಾಗತೀಕರಣದ ಕಾದಲ್ಲಿ ನಾಟಕ ಕಲೆ" ಎಂಬವಿಷಯದಲ್ಲಿ ಡಾ.ಮೀನಾಕ್ಷಿ ರಾಮಚಂದ್ರನ್, ಉಮೇಶ್ ಎಂ.ಸಾಲಿಯಾನ್ ಉಪನ್ಯಾಸ ಮಾಡುವರು.
ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ದಿವಾಕರನ್ ವಿಷ್ಣುಮಂಗಲಂ ಉದ್ಘಾಟಿಸುವರು. ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಅನೇಕ ಕವಿಗಳು ಭಾಗವಹಿಸುವರು. ಕನ್ನಡ-ತುಳು-ಮಲೆಯಾಳಂ ಭಾಷೆಗಳ ಪುಸ್ತಕಗಳು ಈ ಸಮಾರಂಭದಲ್ಲಿ ಲಭ್ಯವಿರುವುವು.