HEALTH TIPS

ಓದುವ ಪಕ್ಷಾಚರಣೆ ಆರಂಭ : ಓದುವಿಕೆಯಿಂದ ತಿಳಿಯುವ ಸತ್ಯದಿಂದ ಪ್ರತಿಭೆ ಹೆಚ್ಚಳ: ಜಿಲ್ಲಾಧಿಕಾರಿ


       ಕಾಸರಗೋಡು:   ಓದುವಿಕೆಯ ಮೂಲಕ ತಿಳಿಯುವ ಸತ್ಯವನ್ನು ಬದುಕಿನಲ್ಲಿ ಅಳವಡಿಸಿದಾಗ ನಮ್ಮ ಪ್ರತಿಭೆ ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟರು.
        ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ  ಬುಧವಾರ ಜರುಗಿದ ಓದುವ ಪಕ್ಷಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
      ಓದಿದ್ದೆಲ್ಲವೂ ಸತ್ಯ ಎನ್ನುವಂತಿಲ್ಲ. ಓದುವಿಕೆಯ ನಡುವೆ ಎಲ್ಲೋ ಅಡಗಿರುವ ಸತ್ಯವನ್ನು ನಾವು ಕಂಡುಕೊಳ್ಳಬೇಕು. ಓದುವಿಕೆಯ ಪ್ರಕ್ರಿಯೆಯಲ್ಲಿ ಆಯ್ಕೆ ಬಹಳ ಪ್ರಧಾನವಾದುದು. ಒಳಿತು ವಿಚಾರಗಳ ಓದು ನಮ್ಮನ್ನು ಉತ್ತಮಪ್ರಜೆಗಳನ್ನಾಗಿಸುತ್ತದೆ. ಓದುವುದು ತಪ್ಪುಮಾಹಿತಿಗಳನ್ನೇ ಆದರೆ ನಮ್ಮ ಹಾದಿಯೂ ತಪ್ಪುವ ಭೀತಿಯಿದೆ ಎಂದವರು ತಿಳಿಸಿದರು.
     ಜಿಲ್ಲಾ ಲೈಬ್ರರಿ ಕೌನ್ಸಿಲ್, ಪಿ.ಎನ್.ಪಣಿಕ್ಕರ್ ಫೌಂಡೇಶನ್,ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಜಂಟಿ ವತಿಯಿಂದ ಕಾರ್ಯಕ್ರಮ ಜರುಗಿತು.
      ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಅವರುಪಿ.ಎನ್.ಪಣಿಕ್ಕರ್ ಅವರ ಸಂಸ್ಮರಣೆ ನಡೆಸಿದರು. ಪ್ಲಸ್-ಟು ವಿದ್ಯಾರ್ಥಿನಿ ನಬೀಸತ್ ಟಿ.ಪಿ.ಮಿಸ್ರಿಯ ಪುಸ್ತಕ ವಾಚನ ನಡೆಸಿದರು. ಜಿಲ್ಲಾ ಗ್ರಂಥಾಲಯ ಮಂಡಳಿ ಅಧ್ಯಕ್ಷ ಡಾ.ಪಿ.ಪ್ರಭಾಕರನ್, ಸರ್ವಶಿಕ್ಷಣ ಅಭಿಯಾನ ಜಿಲ್ಲಾ ಯೋಜನೆ ಅಧಿಕಾರಿ ಪಿ.ಪಿ.ವೇಣುಗೋಪಾಲ್, ಕಾಸರಗೋಡು ಡಯಟ್ ಪ್ರಭಾರ ಪ್ರಾಂಶುಪಾಲ ಕೆ.ರಾಮಚಂದ್ರನ್ ನಾಯರ್, ಶಾಲೆಯ ಪ್ರಾಂಶುಪಾಲೆ ಗೀತಾ ಜಿ.ತೋಪ್ಪಿಲ್, ಸಹಾಯಕ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್ ಮಂಥೇರೋ, ಪ್ರಭಾರ ಮುಖ್ಯಶಿಕ್ಷಕ ಎಂ.ಪಿ.ಸುರೇಶ್, ಸಾರ್ವಜನಿಕ ಶಿಕ್ಷಣ ಸಂಚಾಲಕ ಪಿ.ದಿಲೀಪ್ ಕುಮಾರ್,ಜಿಲ್ಲಾ ಮಾಹಿತಿ ಅಧಿಕಾರಿಮಧುಸೂದನನ್ ಎಂ.ಜಿಲ್ಲಾ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ವಿ.ಕೆ.ಪನೆಯಾಲ್, ತಾಲೂಕು ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ದಾಮೋದರನ್, ಎಂ.ಎ.ಜಲೀಲ್ ಮೊದಲಾದವರು ಉಪಸ್ಥಿತರಿದ್ದರು.       
    ಜಿಲ್ಲಾ ಗ್ರಂಥಾಲಯ ಮಂಡಳಿಯ ನೇತೃತ್ವದಲ್ಲಿ ಜಿಲ್ಲೆಯ ಶಾಲೆ, ಕಾಲೇಜು, ಗ್ರಂಥಾಲಯ, ಇತರ ಸಾಂಸ್ಕೃತಿಕ ಸಂಸ್ಥೆ ಇತ್ಯಾದಿ ಕಡೆಗಳ ಸಹಕಾರದೊಂದಿಗೆ ಜಿಲ್ಲೆಯ ವಿವಿಧೆಡೆ ಓದುವ ಪಕ್ಷಾಚರಣೆ ಜು.4 ವರೆಗೆ ನಡೆಯಲಿದೆ. ಈ ಸರಣಿಯ ಅಂಗವಾಗಿ ಸಂಸ್ಮರಣ ಕಾರ್ಯಕ್ರಮಗಳು, ಓದುವ ಸ್ಪರ್ಧೆ, ಮಾದಕಪದಾರ್ಥ ಬಳಕೆ ವಿರುದ್ಧ ಜಾಗೃತಿ, ಪುಸ್ತಕ ಪ್ರದರ್ಶನ, ಬರಹ ಪೆಟ್ಟಿಗೆ, ಅಭಿನಂದನೆ ಕಾರ್ಯಕ್ರಮಗಳು ಇತ್ಯಾದಿ ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries