ಉಪ್ಪಳ: ಪೈವಳಿಕೆ ಸಮೀಪದ ಚಿಪ್ಪಾರು ಜನಶಕ್ತಿ ಗ್ರಂಥಾಲಯದಲ್ಲಿ ಅಗಲಿದ ರಂಗಕರ್ಮಿ ಡಾ.ಗಿರೀಶ್ ಕಾರ್ನಾಡರಿಗೆ ನುಡಿ ನಮನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ರಝಾಕ್ ಚಿಪ್ಪಾರು ವಹಿಸಿದ್ದರು. ಡಾ. ಗಿರೀಶ್ ಕಾರ್ನಾಡರ ವ್ಯಕ್ತಿ ಪರಿಚಯ, ಸಾಧನೆ, ಪ್ರಶಸ್ತಿಯ ಬಗ್ಗೆ ತಾಲೂಕು ಲೈಬ್ರೇರಿ ಕಾನ್ಸಿಲ್‍ನ ದಾಸಪ್ಪ ಶೆಟ್ಟಿ ವಿವರಿಸಿದರು. ಅಬ್ದುಲ್ ನಿಸಾರ್, ಉಮ್ಮರ್ ಶಾಫಿ ಚಿಪ್ಪಾರು ಉಪಸ್ಥಿತರಿದ್ದರು. ಡಾ.ಗಿರೀಶ್ ಕಾರ್ನಾಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಗ್ರಂಥಾಲಯ ಕಾರ್ಯದರ್ಶಿ ಖಲೀಲ್ ನಾರ್ಣಕಟ್ಟೆ ಸ್ವಾಗತಿಸಿ, ಗ್ರಂಥಪಾಲಿಕೆ ಜಯಲಕ್ಷ್ಮಿ ವಂದಿಸಿದರು.