ಕಾಸರಗೋಡು: ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ವೃದ್ದರಿಗೆ ಮಲಗಲು ಮಂಚ ಒದಗಿಸುವ ಯೋಜನೆಗೆ ಜಿಲ್ಲಾ ಯೋಜನೆ ಸಮಿತಿ ಸಭೆ ಅಂಗೀಕಾರ ನೀಡಿದೆ.
ಪರಿಶಿಷ್ಟ ಜಾತಿ-ಪಂಗಡದ ಮಂದಿಗೆ, ಸಾರ್ವಜನಿಕ ವಿಭಾಗದವರಿಗೆ ಪ್ರತ್ಯೇಕ ಯೋಜನೆಗಳಿವೆ. ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಲ್ಲಿಸಿದ ಯೋಜನೆಗಳಲ್ಲಿ ಬದಲಾವಣೆಗಳಿಗೆ ಸಭೆ ಅಂಗೀಕಾರ ನೀಡಿದೆ. ವಯೋವೃದ್ಧರ ಕಲ್ಯಾಣ ಯೋಜನೆಯಲ್ಲಿ ಅಳವಡಿಸಿ ಮಂಚ ವಿತರಣೆ ನಡೆಸಲಾಗುವುದು. ಪಿಲಿಕೋಡ್ ಗ್ರಾಮಪಂಚಾಯತಿ ಪರಿಶಿಷ್ಟ ಜಾತಿ ಮಂದಿಗಾಗಿ 43500 ರೂ. ಮೀಸಲಿರಿಸಿದೆ. ಸಾರ್ವಜನಿಕ ವಿಭಾಗಕ್ಕಾಗಿ 1.5 ಲಕ್ಷ ರೂ. ಮೀಸಲಿರಿಸಿದೆ. ವಲಿಯಪರಂಬ ಗ್ರಾಮ ಪಂಚಾಯತಿ 1.47 ಲಕ್ಷ ರೂ., ಅಜಾನೂರು ಗ್ರಾಮಪಂಚಾಯತಿಗೆ 2 ಲಕ್ಷ ರೂ.ಮೀಸಲಿರಿಸಿದೆ. ಜಿಲ್ಲಾ ಪಂಚಾಯತಿ 2.6 ಲಕ್ಷ ರೂ., ಕಾಞÂಂಗಾಡ್ ನಗರಸಭೆ 2.4 ಲಕ್ಷ ರೂ. ಈ ಯೋಜನೆಗಾಗಿ ಮೀಸಲಿರಿಸಿವೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳು ಈ ಹಿಂದೆಯೇ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಯೋಜನೆಗೆ ನಿಧಿ ಮೀಸಲಿರಿಸಿವೆ.