ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆಯ ಕುಂಬಳೆ ವಲಯದ ಕುಬಣೂರು ಕಾರ್ಯಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಜ್ಞಾನ ವಿಕಾಸ ಕೇಂದ್ರದ ಸಭೆ ಹಾಗೂ ಅಜ್ಜಿ ಕೈ ತುತ್ತು ವಿಶಿಷ್ಟ ಕಾರ್ಯಕ್ರಮ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಲೀಲಾ ನೀರಮೂಲೆ ವಹಿಸಿದ್ದರು. ಯೋಜನೆಯ ಸೇವಾ ಪ್ರತಿನಿಧಿ ಸುಜಾತ ಶೆಟ್ಟಿ ಮನಕಿನಮೂಲೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಜ್ಜಿ ಕೈ ತುತ್ತು ಎಂಬ ವಿಶೇಷವಾದ ಕಾರ್ಯಕ್ರದಲ್ಲಿ ಹಿರಿಯ ಓರ್ವೆ ಅಜ್ಜಿಯನ್ನು ಆಯ್ಕೆ ಮಾಡಿ ಅವರಿಂದ ಮಕ್ಕಳಿಗೆ ಕೈ ತುತ್ತು ನೀಡಲಾಯಿತು. ಕಾರ್ಯಕ್ರಮದಲ್ಲಿ ಕುಮಾರಿ ಪವಿತ್ರ ನಿರೂಪಿಸಿದರು. ಪಾರ್ವತಿ ಸ್ವಾಗತಿಸಿ, ಸೌಮ್ಯಲತ ವಂದಿಸಿದರು. ಬಳಿಕ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.