HEALTH TIPS

ಮಂಗಳೂರು ಸಮಾಚಾರದೊಳಗಣ ಸಂಗತಿಯು

       
     ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ.ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಬಾಸೆಲ್ ಮಿಶನ್ ಸಂಸ್ಥೆಯಿಂದ ನಡೆಯಿತು.ಮಂಗಳೂರು ಸಮಾಚಾರ ವಾರಪತ್ರಿಕೆಯ ಜುಲೈ 1 1841ರಲ್ಲಿ ಮೊದಲಿಗೆ ಪ್ರಕಟ. ಇದರ ಸಂಪಾದಕ ಹೆರ್ಮನ್ ಮ್ಯೋಗ್ಲಿಂಗ್ 173 ವರ್ಷಗಳ ದೀರ್ಘ ಇತಿಹಾಸ ಹೊಂದಿರುವÀ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು ತುಳುನಾಡಿನ ಮಂಗಳೂರಿನಲ್ಲಿ ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ 1843ರಲ್ಲಿ 'ಮಂಗಳೂರು ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಬಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.
     ಮದ್ರಾಸ್ ಆದಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಸ್ವಿಜಲೆರ್ಂಡಿನ ಬಾಸೆ???ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿ ಹಲವಾರು ಸಾಹಸ ಮಾಡಿದ್ದಾರೆ. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ಪ್ರೆಸ್ ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಇವರು 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಬಿರುಚಿ ಉಂಟು ಮಾಡಿದರೂ ಸುಮಾರು 50 ವರ್ಷಗಳ ವರೆಗೆ ಪತ್ರಿಕೋದ್ಯಮ ಅಭಿವೃದ್ದಿಗೊಂಡದ್ದು ಕಂಡುಬರುವುದಿಲ್ಲ.
      ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಕೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಪ್ರಶಸ್ಥ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ, ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಬಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು. ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು. ಮಂಗಳೂರು ಸಮಾಚಾರ ವಾರ ಪತ್ರಿಕೆಯ ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. (ಮಂಗಳೂರು ಸಮಾಚಾರ-ಜುಲೈ 1843-1844 ಫೆಬ್ರವರಿ ) ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು.
       ಪತ್ರಿಕೆಯ ಪೀಠಿಕೆ. ಮಂಗಳೂರಿನವರು ಮೊದಲಾದ ಈ ದೇಶಸ್ಥರು ಕಥೆಗಳನ್ನೂ ವರ್ತಮಾನಗಳನ್ನೂ ಕೇಳುವದರಲ್ಲಿಯೂ ಹೇಳುವುದರಲ್ಲಿಯೂ ಬಹಳ ಇಚ್ಚೆಯುಳ್ಳವರರಾಗಿದ್ದಾರೆ. ಬೆಳಿಗ್ಗೆ ಬಂದ್ರದಲ್ಲ್ಯಾಗಲಿ ಕಛೇರಿ ಹತ್ತರವಾಗಲಿ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಷರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ.
   ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ.ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ.

ವೂರ ವರ್ತಮಾನ
ಸರಕಾರದ ನಿರೂಪಗಳು
ಸರ್ವರಾಜ್ಯ ವರ್ತಮಾನಗಳು
ನೂತನವಾದ ಆಶ್ಚರ್ಯ ಸುದ್ಧಿಗಳು
ಅನ್ಯರ ನಡ್ತೆಗಳು
ಸುಬುದ್ಧಿಗಳು
ಕಥೆಗಳು
ಯಾರಾದರೂ ವೊಂದು ವರ್ತಮಾನ ಅಥವಾ ಒಂದು ಮಾತು ಇದರಲ್ಲಿ ಸೇರಿಸಿ ಛಾಪಿಸಬೇಕೆಂತಾ ಬರದು ಕಳುಹಿಸಿದರೆ ಆ ಸಂಗತಿಯ ಸತ್ಯವಾಗಿದ್ದರೆ ಅದು ಸಹಾ ಈ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ.
       ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಯಿಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮಾರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆ ಇರುತ್ತಾ ಬಂದರು. ಆದಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆÀಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ದ ಮಾಡಿ ಅದನ್ನು ವೋದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವದು ಈ ಕಾಗದವನ್ನು ಬರೆಯುವವರಿಗೂ ವೋದುವವರಿಗೂ ದೇವರು ಬುದ್ಧಿಯನ್ನು ಕೊಡಲಿ. ಇಂಥಾ ಸಮಾಚಾರ ಕಾಗದವನ್ನು ಬರಿಯುವವನು ವೋದುವವರೆಲ್ಲರಿಗೆ ಸಂತೋಷ ಪಡಿಸುವ ಹಾಗೆ ಬರಿಯಬೇಕೆಂದು ಮನಸು ಮಾಡುವನು. ಆದರೂ ಕೆಲವರು ಅಂಗೀಕರಿಸಿಯೂ ಕೆಲವರು ತಿರಸ್ಕರಿಸಿದರೆ ಆ ವಿಶಯಕ್ಕೆ ಆಧಾರಕ್ಕಾಗಿ ಪುರಂದರದಾಸರು ಮಾಡಿದ ಪದಗಳಲ್ಲಿ ವೊಂದು ಸಹಾ ಸರಿಯಾಗಿ ಹೇಳಲ್ಪಡುತ್ತದೆ.

2- ಯೇನಾಹೇಳುವೆನೈಯ್ಯಯ್ಯ ಈ ಮಾನವ ಜನರನ್ನು ಮೆಚ್ಚಿಸಲುಂಟೆ, ಯೇನಹೇಳುವೆನೈಯ್ಯಯ್ಯ ಮಾತನಾಡದೆ ಮೂಕನಂತಾದರೆ ಮೂಕನೆಂದು ದಿಕ್ಕರಿಸುವರು. ಚಾತುರ್ಯದಿಂದಲಿ ಮಾತುಗಳಾಡಲು ಅತನೇ ಬಾಯ್ಬಡಕನೆಂಬರು

ಹೀಗೆ ಒಳ್ಳೆ ಮಾತುಗಳಿಂದ ಜನರನ್ನು ಆಕರ್ಶಿಸಿ ಪತ್ರಿಕೆ ಹೊರ ಬರುತ್ತಿತ್ತು. ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರು ಸಮಾಚಾವಾದರು ಇದು ಸ್ವದೇಶದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ.

"ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶ ವಿರುತ್ತಿತ್ತು. "

    ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ತಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರು ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಬಿನ್ನವಾದ ಶೈಲಿಯಲ್ಲಿ ಬರುತ್ತಿತ್ತು ಎನ್ನುವುದಕ್ಕೆ ಈ ಮೊದಲು ಪತ್ರಿಕೆಗಳಲ್ಲಿ ತಿಳಿದುಕೊಂಡದ್ದೇ ಸಾಕ್ಷಿ. ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಟಾರದಲ್ಲಿ ಅಥವಾ ಕ್ರೈಸ್ತರಾದವರ ಮದ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅದ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕøತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು. ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮತ ಮುದ್ರಣ ರೂಪದಲ್ಲಿ ಹೊರಬಂದುದು ಇಲ್ಲಿ.
   ಮರವು ತನ್ನನ್ನು ಕಡಿಯಬಂದವನ ಮೇಲೆ ನೆರಳನ್ನು ಕೊಡುವುದನ್ನು ಹೇಗೆ ನಿಲ್ಲಿಸುವುದಿಲ್ಲವೋ ಹಾಗೆಯೇ ಸಜ್ಜನರು ಶತ್ರುವೇ ಆಗಿರಲಿ ಮನೆಗೆ ಬಂದರೆ ಅತಿಥ್ಯವನ್ನು ಕೊಡದೇ ಇರುವುದಿಲ್ಲ. ಚಂಡಾಲನ ಮನೆಯಾದರೇನಂತೆ ಚಂದಿರನು ಅಲ್ಲಿಯೂ ಬೆಳಕನ್ನು ನೀಡುತ್ತಾನಷ್ಟೇ. ಹಾಗೆಯೇ ಸಾದು ಜನರು ಗುಣರಹಿತರಲ್ಲಿಯೂ ದಯೆ ತೋರಿಸುತ್ತಾರೆ. ಈ ಭಾವದ ಒಂದು ಪದ್ಯವು ಹಿತೋಪದೇಶದಲ್ಲಿ ಕಂಡುಬರುತ್ತದೆ. ಆ ಶ್ಲೋಕವನ್ನು ಕೊಟ್ಟು ಅದಕ್ಕೆ ಸಮಾನಾಗಿರುವ ಏಸುವಿನ ಈ ವಾಕ್ಯವನ್ನು ಉದ್ದರಿಸಲಾಗಿದೆ. "ನಾನು ನಿಮಗೆ ಹೇಳುವುದೇನೆಂದರೆ ಶತ್ರುಗಳಿಗೆ ಪ್ರೀತಿ ಮಾಡಿರಿ ನಿಮಗೆ ಶಪಿಸುವವರನ್ನು ಆಶೀರ್ವದಿಸಿರಿ, ನಿಮಗೆ ಹಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮಗೆ ಹಿಂಸೆಯೂ ನಿಂದೆಯೂ ಮಾಡುವವರಿಗೋಸ್ಕರ ಪ್ರಾರ್ಥಿಸಿರಿ. "
    2ನೇ ಪತ್ರಿಕೆಯಾದ ಕನ್ನಡ ಸಮಾಚಾರ ( 1844 ಜೂನ್-1844 ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆÉಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ದಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ದಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries