ಉಪ್ಪಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೇಕೂರು ಯುವ ಶಕ್ತಿ ಪ್ರೆಂಡ್ಸ್ ಸರ್ಕಲ್ ಗ್ರಂಥಾಲಯದಲ್ಲಿ ಪರಿಸರ ಸಂರಕ್ಷಣಾ ಮಾಹಿತಿ ಶಿಬಿರ ಭಾನುವಾರ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಬೊಳುವಾಯಿ ತಿಮ್ಮಪ್ಪ ಭಂಡಾರಿ ಅವರು ಪರಿಸರ ಸ್ನೇಹೀ ಕೃಷಿ ವ್ಯವಸ್ಥೆ ಹಾಗೂ ಚಟುವಟಿಕೆಗಳ ಬಗ್ಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಮಗ್ರ ಮಾಹಿತಿ ನೀಡಿ ಗ್ರಂಥಾಲಯದ ಸದಸ್ಯರಿಗೆ ತಾಉ ಬೆಳೆಸಿದ ಗಿಡಗಳನ್ನು ಉಚಿತವಾಗಿ ವಿತರಿಸಿದರು.
ಗ್ರಂಥಾಲಯದ ಬಾಲವೇದಿ ವಿಭಾಗದ ಕಾರ್ಯದರ್ಶಿ ನವನೀತ ಶೆಟ್ಟಿ ಅವರು ಜಾಗತಿಕ ಪರಿಸರ ಮಾಲಿನ್ಯದ ಮಟ್ಟ, ಅದರ ದುಷ್ಪರಿಣಾಮ ಹಾಗೂ ತಡೆಗಟ್ಟಲು ಅನುಸರಿಸಬೇಕಾದ ಸರಳ ಸೂತ್ರಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ತರಗತಿ ನಡೆಸಿದರು.
ದಾಮೋದರ ಬೊಳ್ಳಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಲ್ಪಾಡಿ ಗ್ರಾ.ಪಂ.ಸದಸ್ಯ ಉಮೇಶ ಶೆಟ್ಟಿ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ವನಿತಾ ಆರ್.ಶೆಟ್ಟಿ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಸ್ವಾಗತಿಸಿ, ವಂದಿಸಿದರು.