ಮುಳ್ಳೇರಿಯ: ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಾಗಿ ನಿರ್ಮಿಸಲಾದ ಮೂರು ಅಂತಸ್ತಿನ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಕಿಫ್‍ಬಿ ಮಂಜೂರುಗೊಳಿಸಿದ ಮೂರು ಕೋಟಿ ರೂ.ನ ಸಹಾಯದಿಂದ ನಿರ್ಮಿಸಲಾದ ಈ ಕಟ್ಟಡದಲ್ಲಿ ಒಟ್ಟು 15 ತರಗತಿ ಕೋಣೆಗಳಿವೆ. ಪ್ರತಿಯೊಂದು ಮಹಡಿಯ ಇಬ್ಬದಿಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡವು ವಿಕಲಚೇತನ ಸ್ನೇಹಿ ತರಗತಿ ಕೋಣೆ ಹಾಗೂ ಶೌಚಾಲಯವನ್ನು ಹೊಂದಿದೆ. ತರಗತಿ ಕೊಠಡಿಗಳು ಹೈಟೆಕ್ ಆಗಿದ್ದು, ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಇದು ಸಹಕಾರಿಯಾಗಲಿದೆ.
ಜೂ. 6 ರಂದು ಪ್ರಸ್ತುತ ಸಾಲಿನ ಶಾಲಾ ಪ್ರವೇಶೋತ್ಸವ ದಿನದಂದು ಬೆಳಿಗ್ಗೆ 9.30ಕ್ಕೆ ಕಂದಾಯ ಸಚಿವ ಇ. ಚಂದ್ರಶೇಖರನ್ ನೂತನ ಕಟ್ಟಡವನ್ನು ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಮಂಜೂರುಗೊಳಿಸಿದ 50ಲಕ್ಷ ರೂ. ಅನುದಾನ ವಿನಿಯೋಗಿಸಿ ನಿರ್ಮಿಸಲಾಗುತ್ತಿರುವ ಶಾಲಾ ಕಚೇರಿಯನ್ನೊಳಗೊಂಡ ಎರಡು ಮಹಡಿಯ ಕಟ್ಟಡದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.