ಬದಿಯಡ್ಕ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬದಿಯಡ್ಕ ಗ್ರಾಮಪಂಚಾಯತಿ ವತಿಯಿಂದ ಪಂಚಾಯತಿ ಮುಂಭಾಗದಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಬುಧವಾರ ಬಿದಿರು ಗಿಡಗಳನ್ನು ನೆಟ್ಟು ಉದ್ಘಾಟಿಸಿದರು.
ಅಂತರ್ಜಲ ಮಟ್ಟದ ಏರಿಕೆಗಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಬಿದಿರು ಕೃಷಿ ಯೋಜನೆಯ ಭಾಗವಾಗಿ ವಿವಿಧ ವಾರ್ಡುಗಳಲ್ಲಾಗಿ 20000 ಬಿದಿರು ಗಿಡಗಳನ್ನು ನೆಟ್ಟು ಬೆಳೆಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ನಡೆದುಬರುತ್ತಿದೆ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಗ್ರಾ.ಪಂ.ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಸಿರಾಜ್ ಮುಹಮ್ಮದ್, ಜಯಶ್ರೀ, ಪ್ರೇಮ, ಜಯಂತಿ, ಅನಿತಾ ಕ್ರಾಸ್ತಾ, ಗ್ರಾ.ಪ. ಉದ್ಯೋಗಸ್ಥರು, ಉದ್ಯೋಗಖಾತರಿ ಯೋಜನೆಯ ಕಾರ್ಯಕರ್ತರು ಜೊತೆಗಿದ್ದರು.