ಬದಿಯಡ್ಕ: ಬೇಳದ ಸಂತ ಬಾರ್ತಲೋಮಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪ್ರಸಕ್ತ ಸಾಲಿನ ಶಾಲಾ ಪ್ರವೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ನವಾಗತ ಪುಟಾಣಿಗಳನ್ನು ಮೆರವಣಿಗೆಯ ಮೂಲಕ ಶಾಲೆಗೆ ಸ್ವಾಗತಿಸಿ ಕರೆತರಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾ.ಪಂ.ಸದಸ್ಯೆ ಅನಿತಾ ಕ್ರಾಸ್ತಾ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಥಿಯಾಸ್ ಅಧ್ಯಕ್ಷತೆ ವಹಿಸಿದ್ದರು. ಮಾತೃಸಂಘದ ಅಧ್ಯಕ್ಷೆ ಸುಲೋಚನಾ, ಶಾಲಾ ಮೇಲ್ವಿಚಾರಕಿ ಕಾರ್ಮಿನ್ ಪಿರೇರಾ ಉಪಸ್ಥಿತರಿದ್ದು ಶುಭಹಾರೈಸಿದರು. ಶಿಕ್ಷಕ ಸ್ಟೇನಿ ಲೋಬೋ ಕಲ್ಲಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪೂರಕ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ನಿವೇದಿತ ಸ್ವಾಗತಿಸಿ,ಶಿಕ್ಷಕಿ ಬನಶಂಕರಿ ವಂದಿಸಿದರು. ಶಿಕ್ಷಕ ಸದಾಶಿವ ಕಾರ್ಯಕ್ರಮ ನಿರೂಪಿಸಿದರು.