ಮುಳ್ಳೇರಿಯ: ಬೆಳ್ಳಿಪ್ಪಾಡಿ ಮಧುವಾಹಿನಿ ಗ್ರಂಥಾಲಯದ ಆಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಇತ್ತೀಚೆಗೆ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಕೇರಳ ಲೋಕಲ್ ಫಂಡ್ ಸೀನಿಯರ್ ಡೆಪ್ಯೂಟಿ ಡೈರೆಕ್ಟರ್ ರಾಜರಾಮ ಚೇಕೋಡ್ ಉದ್ಘಾಟಿಸಿ ಮಾತನಾಡಿದರು.ಇರಿಯಣ್ಣಿ ಸರಕಾರಿ ಹೈಸ್ಕೂಲ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಚೆರಿಯನ್ ಅಧ್ಯಕ್ಷತೆ ವಹಿಸಿದರು. ಸಿ.ಕೆ.ಬಾಲಕೃಷ್ಣನ್, ಪಿ.ಕರುಣಾಕರನ್, ಸುಜಿತ ಚರವು, ಶ್ರೀಜ ಬಳ್ಳಮೂಲೆ, ಶೋಭ ಚರವು, ಪಿ.ಜ್ಯೋತಿ ಸೂರ್ಯನ್, ರಾಜೇಶ್ ಬಳ್ಳಮೂಲೆ, ಮೂಸಾ ಕೆ.ಬಿ. ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಕೆ.ಜಯಚಂದ್ರನ್ ವಂದಿಸಿದರು.