ಪೆರ್ಲ:ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮತ್ತು ಮಚೆರ್ಂಟ್ ವೆಲ್ಫೇರ್ ಸೊಸೈಟಿ ಪೆರ್ಲ ಘಟಕದ ವಾರ್ಷಿಕ ಮಹಾ ಸಭೆ ಪೆರ್ಲ ವ್ಯಾಪಾರ ಭವನದಲ್ಲಿ ಶನಿವಾರ ಜರುಗಿತು.
ಸಮಿತಿ ಅಧ್ಯಕ್ಷ ಬಿ.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದರು.ಪ್ರಧಾನ ಕಾರ್ಯದರ್ಶಿ ಟಿ.ಬಾಲಕೃಷ್ಣ ಭಟ್ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಗಣೇಶ್ ಪ್ರಸಾದ್ ಭಟ್ ಲೆಕ್ಕ ಪತ್ರ ಮಂಡಿಸಿದರು. 2019-21ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ವ್ಯಾಪಾರಿಗಳ ಮಕ್ಕಳನ್ನು ಗೌರವಿಸಲಾಯಿತು. ಜಿಲ್ಲಾಧ್ಯಕ್ಷ ಮೊಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಕೆ.ಜೆ.ಸಜಿ ಉಪಸ್ಥಿತರಿದ್ದರು. ನೂತನ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಭಟ್ ವಂದಿಸಿದರು.