HEALTH TIPS

ದೇವಕಾನ ಕೃಷ್ಣ ಭಟ್ ಅವರಿಗೆ ನುಡಿ ನಮನ-ವಸ್ತುನಿಷ್ಠ ನಿಲುವುಗಳ ದಿ.ದೇವಕಾನರ ಅಗಲುವಿಕೆ ತುಂಬಲಾರದ ನಷ್ಟ-ಡಾ.ಜೋಶಿ


      ಉಪ್ಪಳ: ಯಕ್ಷಗಾನವನ್ನು ತನ್ನ ಜೀವನದ ಉಸಿರಾಗಿ ಸ್ವೀಕರಿಸಿ, ಪರಂಪರೆ ಮತ್ತು ಶಾಸ್ತ್ರೀಯತೆಗೆ ಆದ್ಯತೆ ನೀಡಿ ಹಲವಾರು ಮಂದಿಗೆ ಆಶ್ರಯದಾತರಾಗಿ ಮುನ್ನಡೆದ ದೇವಕಾನ ಕೃಷ್ಣ ಭಟ್ ಅವರ ಅಗಲುವಿಕೆ ತುಂಬಲಾರದ ನಷ್ಟವಾಗಿದೆ. ರಂಗ ಮೀಮಾಂಸಕರಾಗಿ ವಸ್ತುನಿಷ್ಠ ನಿಲುವುಗಳ ಅವರ ಬದುಕು-ಕಲಾ ಜೀವನ ಮಾದರಿಯಾಗಿದ್ದುದು ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಸಂಶೋಧಕ ಡಾ.ಪ್ರಭಾಕರ ಜೋಶಿ ಅವರು ತಿಳಿಸಿದರು.
    ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾವಿದ, ಪ್ರಸಾದನ ತಜ್ಞ ದಿ.ದೇವಕಾನ ಕೃಷ್ಣ ಭಟ್ ಅವರ ಸ್ಮರಣಾರ್ಥ ದೇವಕಾನದ ಅವರ ಸ್ವಗೃಹದಲ್ಲಿ ಆಯೋಜಿಸಲಾಗಿದ್ದ ಸಂಸ್ಮರಣಾ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
    ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ಅರ್ಥಧಾರಿ, ಸಂಘಟಕ ಉಜಿರೆ ಅಶೋಕ ಭಟ್ ಅವರು, ಯುವ ತಲೆಮಾರಿಗೆ ಎಂದಿಗೂ ಮಾರ್ಗದರ್ಶಕರಾಗಿದ್ದ ದೇವಕಾನರ ಸ್ಥಿಗ್ದ-ಸರಳ ವ್ಯಕ್ತಿತ್ವ ಅವರನ್ನು ಹೆಚ್ಚು ಆಕರ್ಷಣೀಯಗೊಳಿಸಿತ್ತು. ಯಕ್ಷಗಾನ ಕ್ಷೇತ್ರದ ಸಮಗ್ರ ಜ್ಞಾನ ವಿಸ್ತಾರತೆಯ ಅವರ ತಿಳುವಳಿಕೆ ಗ್ರಾಂಥಿಕ ದಾಖಲಾತಿಗಿಂತಲೂ ಮಿಗಿಲಾಗಿತ್ತು ಎಂದು ನೆನಪಿಸಿದರು. ಪ್ರಶಸ್ತಿ, ಸನ್ಮಾನಗಳ ಹಿಂದೆ ಬೀಳದ ಅವರಿಗೆ, ಅಪಾರ ಪ್ರಮಾಣದ ಶಿಷ್ಯರು-ಅಭಿಮಾನಿಗಳ ಸಂಪ್ರಾರ್ಥನೆಗಳು ಸದ್ಗತಿಯನ್ನು ಒದಗಿಸಲಿದೆ ಎಂದು ತಿಳಿಸಿದರು.
    ವೇದಿಕೆಯಲ್ಲಿ ದೇವಕಾನ ಕೃಷ್ಣ ಭಟ್ ಅವರ ಒಡನಾಡಿ ರಾಧಾಕೃಷ್ಣ ಮಾಸ್ತರ್, ಹಿರಿಯ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದರಾದ ಶ್ರೀಧರ ಭಂಡಾರಿ ಪುತ್ತೂರು, ಕುಂಬಳೆ ಶ್ರೀಧರ ರಾವ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ದಿವಾಣ ಶಿವಶಂಕರ ಭಟ್, ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್,  ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಧರ್ಮೇಂದ್ರ ಮಾಸ್ತರ್ ಬಾಯಾರು ಮೊದಲಾದವರು ಉಪಸ್ಥಿತರಿದ್ದು ದಿವಂಗತ ಕೃಷ್ಣ ಮಾಸ್ತರ್ ಅವರ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಸಂಘಟಕ ಸಂಕಬೈಲು ಸತೀಶ ಅಡಪ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ದೇವಕಾನ ಕೃಷ್ಣ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ದಾಂಜಲಿ ಸಲ್ಲಿಸಲಾಯಿತು. ಯಕ್ಷಗಾನ ಕಲಾವಿದರುಗಳು, ದೇವಕಾನರ ಒಡನಾಡಿಗಳು, ಬಂಧುಗಳು, ಸ್ಥಳೀಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries