HEALTH TIPS

ಕಾಸರಗೋಡು ಜಿಲ್ಲೆಯಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

     
      ಕಾಸರಗೋಡು: ಯೋಗವು 5000 ವರ್ಷಗಳ ಇತಿಹಾಸವುಳ್ಳ ಜ್ಞಾನ ಭಂಡಾರ. ಯೋಗ ಎಂದರೆ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿಸುವ ಅತ್ಯಂತ ಪ್ರಾಚೀನ ಶಾಸ್ತ್ರ. ಪತಂಜಲಿ ಮಹರ್ಷಿಗಳು ಆರಂಭಿಸಿದ ಯೋಗ ಶಾಸ್ತ್ರವು ಇಂದು ಪ್ರಪಂಚದಾದ್ಯಂತ ಮಾನ್ಯತೆ ಪಡೆದುಕೊಂಡು ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
    ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ಭಾವನಾತ್ಮಕ ಎಂಬ ಪಂಚಮುಖಿ ನೆಲೆಗಳಲ್ಲಿ ವ್ಯಕ್ತಿಯ ಸಕಾರಾತ್ಮಕ ಪರಿವರ್ತನೆಯನ್ನು ತರಬಲ್ಲ, ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಶಾಸ್ತ್ರವಾಗಿರುವ ಯೋಗ ಶಾಸ್ತ್ರದ ಅಷ್ಟ ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾ„ಗಳ ನಿಯಮಿತ ಅಭ್ಯಾಸದಿಂದ ಉದ್ದೇಶಿತ ಪರಿಣಾಮಗಳನ್ನು ಪಡೆದುಕೊಳ್ಳಲು ಸಾಧ್ಯ.
    ಯೋಗದ ಮೂಲಕ ವಿಶ್ವವನ್ನು ಜೋಡಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಸರಕಾರದ ಕನಸಿಗೆ ಅಗಾಧ ಬೆಂಬಲ ಲಭ್ಯವಾಗಿದ್ದು, ಶುಕ್ರವಾರ ವಿಶ್ವದಾದ್ಯಂತ ಐದನೇ ಬಾರಿ ಯೋಗ ದಿನವನ್ನು ಆಚರಿಸಲಾಯಿತು.
      ಕಾಸರಗೋಡು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಮಹಿಳಾ ಸಮಾಜ, ಕಾಲೇಜು ಮೊದಲಾದವುಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಜಿಲ್ಲೆಯ ಯೋಗಾಸನ ಕೇಂದ್ರಗಳಲ್ಲೂ ವಿಶ್ವ ಯೋಗ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕೆಲವೆಡೆ ಒಂದು ವಾರಗಳ ಕಾಲ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಯೋಗದ ಬಗ್ಗೆ ತರಗತಿ, ಪ್ರದರ್ಶನಗಳು ನಡೆಯಿತು.
       ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್ ಇಲಾಖೆ ವತಿಯಿಂದ ಶುಕ್ರವಾರ ಬೆಳಗ್ಗೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ವರೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಗ ಪ್ರದರ್ಶನ ನಡೆಯಿತು.
        ಬದಿಯಡ್ಕ, ಜೂ.21: ಇಲ್ಲಿನ ಕುನಿಲ್ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಆರ್ಟ್ ಆಫ್ ಲೀವಿಂಗ್ ಪತಂಜಲಿ ತರಬೇತಿದಾರ ರೇಜಿ ಶ್ರೀಮಂಗಳಂ ಅವರು ಶಾಲಾ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ಸಿ.ಇ.ಒ. ವಿಕ್ರಮ್ ದತ್ತ್, ಪ್ರಾಂಶುಪಾಲೆ ಪಿ.ವಿ.ರತಿ, ಸಿಸ್ಟಿರ್ ಜೀವಾ ಚಾಕೋ, ದೈಹಿಕ ಶಿಕ್ಷಕ ರಾಜು, ಪ್ರಬಂಧಕ ಪ್ರಶಾಂತ್ ಕೆ.ಪಿ. ಹಾಗು ಶಾಲಾ ಸಿಬ್ಬಂದಿಗಳು ಯೋಗ ತರಬೇತಿಯಲ್ಲಿ ಉಪಸ್ಥಿತರಿದ್ದರು.
(ಚಿತ್ರ ಮಾಹಿತಿ: ಬದಿಯಡ್ಕ ಕುನಿಲ್ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗ) 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries