ಕಾಸರಗೋಡು: ಜಿಲ್ಲೆಯನ್ನು ಬಿದಿರು ಬೆಳೆಯ ರಾಜಧಾನಿಯಾಗಿಸುವ ಜಿಲ್ಲಾಡಳಿತೆಯ ಬ್ಯಾಂಬೂ ಕ್ಯಾಪಿಟಲ್ ಆಫ್ ಕೇರಳ ಯೋಜನೆಯ ಜಾಗೃತಿ ತರಗತಿ ಚೆರ್ಕಳ ಸೆಂಟ್ರಲ್ ಶಾಲೆಯಲ್ಲಿ ಜರುಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತರಗತಿ ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಷಾಹಿನಾ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಎ.ಡಿ.ಸಿ. ವೆಬಿನ್ ಜೋನ್, ಎಸ್.ಎಸ್.ವಿನೋದ್, ಸದಸ್ಯರಾದ ಎಂ.ಸಿ.ಎ.ಫೈಝಲ್ ಸಲಾಂ, ಮಹಮ್ಮದ್ ತೈವಳಪ್, ಸುಫೈಜಾ ಮುನೀರ್, ಸಿಂಧು, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಬೇವಿ ಮೊದಲಾದವರು ಉಪಸ್ಥಿತರಿದ್ದರು.