ಮಂಜೇಶ್ವರ: ಪಾತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವರ್ಕಾಡಿ ಇದರ ಸಹಯೋಗದೊಂದಿಗೆ ಮಾದಕ ದ್ರವ್ಯ ವ್ಯಸನದ ಬಗ್ಗೆ ವಿಮುಕ್ತಿ ಎಂಬ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಸಾಮಾನಿ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಜೀಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಸ್ಟರ್ ರಣಿತ ಮತ್ತು ಅವರ ಸಹೋದ್ಯೋಗಿ ತರಗತಿ ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯ ಪದ್ಮನಾಭ, ಮಾತೃಸಂಘದ ಅಧ್ಯಕ್ಷೆ ರೇವತಿ ವಿಮುಕ್ತಿಯ ಉದ್ದೇಶ ವಿವರಿಸಿದರು. ಉಸ್ಮಾನ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು ಜಯಲಕ್ಷ್ಮಿ ಟೀಚರ್ ವಂದಿಸಿದರು. ಜೀನಮೊಳ್ ಟೀಚರ್, ಸೈನಾಜ್ ಟೀಚರ್ ಪುಸ್ತಕ ಪ್ರದರ್ಶನ ನಡೆಸಿದರು.