ಮಂಜೇಶ್ವರ: ಗುವೆದಪಡ್ಪು ಪ್ರೇರಣಾ ಗ್ರಂಥಾಲಯದ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಇತ್ತೀಚೆಗೆ ನಡೆಯಿತು.
ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೋಣಿಬೈಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಎ.ಬಿ.ರಾಧಾಕೃಷ್ಣ ಬಲ್ಲಾಳ್ ಉದ್ಘಾಟಿಸಿ ಮಾತನಾಡಿದರು. ಸೇಸ ಮಿತ್ತಮೂಲೆ ಗಿಡಗಳನ್ನು ವಿತರಿಸಿದರು. ಗೋಪಾಲ ಗುವೆದಪಡ್ಪು, ತುಳಸೀದಾಸ್, ಪವನ್ ಕುಮಾರ್, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಗ್ರಂಥಾಲಯದ ಪರಿಸರದಲ್ಲಿ ಶುಚೀಕರಣ ನಡೆಯಿತು. ಗ್ರಂಥಾಲಯದ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ವಂದಿಸಿದರು.