HEALTH TIPS

ಕೊಲೆ ,ಹಿಂಸೆ, ಮದ್ಯ-ಮಾದಕ ವಸ್ತುಗಳಿಗೆದುರಾಗಿ ಮಂಜೇಶ್ವರದಲ್ಲಿ ಇಂದು ಸಾಮಾಜಿಕ ಕಾರ್ಯಕರ್ತರ ಸಂಗಮ

   
   ಮಂಜೇಶ್ವರ: ಸ್ವಾತಂತ್ರ್ಯಾನಂತರ ಭಾರತದಲ್ಲಿ  ಸುದೃಢ ಅಭಿವೃದ್ಧಿ ಹಾಗೂ ಶಾಂತಿಯುತ ವಾತಾವರಣ ನೆಲೆ ನಿಲ್ಲಿಸುವಲ್ಲಿ ಮಹಾತ್ಮಾ ಗಾಂಧೀಜಿಯವರು ಅವಿಶ್ರಾಂತವಾಗಿ ಶ್ರಮಿಸಿದ್ದರು ಎಂದು ನಮಗೆಲ್ಲರಿಗೂ ತಿಳಿದ ವಿಚಾರವಾಗಿದೆ.
    ಕೋಮು ವಿದ್ವೇಷದ ಮೂಲಕ  ಸಹಸ್ರಾರು ಮುಗ್ದರ ರಕ್ತ ತರ್ಪಣ ನಡೆದ ಕಲ್ಕತ್ತಾ ನಗರ ಬೀದಿಗಳು ಮತ್ತು ನೌಕಾಲಿ ಗ್ರಾಮದಲ್ಲಿ ಈ ಬರಿಗಾಲ ಅರೆಬೆತ್ತಲ ಫಕೀರ ಶಾಂತಿದೂತನು ಅವಿಶ್ರಾಂತವಾಗಿ ಶಾಂತಿ ಮಂತ್ರ ಪಠಿಸುತ್ತಾ, ವಿದ್ವೇಷ ಹಾಗೂ ಅಸಹನೆಗೆ ಬದಲು ಸಹಬಾಳ್ವೆ ಮತ್ತು ಸ್ನೇಹವನ್ನು ಮೈಗೂಡಿಸಿಕೊಳ್ಳಲು ಜನರಲ್ಲಿ ವಿನಂತಿಸುತ್ತಾ ನಡೆದಾಡಿದ್ದು ಸ್ಮರಣೀಯ.
    "ಪ್ರತಿಯೋರ್ವರೂ ಶಾಂತಿ ಪ್ರಚಾರಕರಾಗಬೇಕು ಮತ್ತು ಶಾಂತಿ ಸೈನಿಕರಾಗಬೇಕೆಂದು" ಗಾಂಧೀಜಿಯವರು ನೌಕಾಲಿಯಲ್ಲಿ ಸಂದೇಶ ನೀಡಿದರು.ಗುಂಡೇಟು ತಿಂದು  ದೆಹಲಿಯ ಬಿರ್ಲಾ ಹೌಸ್ ನಲ್ಲಿ ಕೊನೆಯುಸಿರು ಎಳೆಯುವಾಗಲೂ ಅವರು ನೀಡಿದ್ದು  ಇದೇ ಸಂದೇಶವಾಗಿತ್ತು.
    ಗಾಂಧೀಜಿಯವರ 150 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮೆಲ್ಲರ ಹೃದಯಗಳಲ್ಲಿ ಈ   ಶಾಂತಿ ದೀಪ ಪ್ರಜ್ವಲಿಸಬೇಕಾಗಿದೆ.
1957 ರಲ್ಲಿ ಗಾಂಧೀಜಿಯವರ ಶಿಷ್ಯರಾದ ಆಚಾರ್ಯ ವಿನೋಬಾ ಭಾವೆಯವರ ಭೂದಾನ ಯಾತ್ರೆಯ ಸಂದರ್ಭದಲ್ಲಿ  ಕೇರಳದಾದ್ಯಂತ ನಡೆಸಿದ ಯಾತ್ರೆಯ ಸಮಾಪನ ದಿನದಂದು ಒಂದು ಐತಿಹಾಸಿಕ ಮಹತ್ಕಾರ್ಯಕ್ಕೆ ನಾಂದಿ ಹಾಡಲಾಯಿತು.1957 ಆಗಸ್ಟ್ 23 ರಂದು ಮಂಜೇಶ್ವರದಲ್ಲಿ ಕೇರಳ ಗಾಂಧಿ ಕೇಳಪ್ಪನ್ ನೇತೃತ್ವದ 8 ಜನರ ಗುಂಪಿಗೆ ಶಾಂತಿಸೇನಾ ಪ್ರತಿ ಜ್ಞೆ ಬೋಧಿಸುವ ಮೂಲಕ ಗಾಂಧೀಜಿಯವರ ಶಾಂತಿಸೇನೆಗೆ ರೂಪು ನೀಡಲಾಯಿತು.
      ಮಂಜೇಶ್ವರ ದೇವಸ್ಥಾನ ಮೈದಾನದ ಬಳಿ 1957 ರಲ್ಲಿ  ಕೇಳಪ್ಪನ್ ಜೊತೆಗೆ ವಿನೋಬಾ ಭಾವೆಯವರಿಂದ ಪ್ರತಿ  ಜ್ಞೆ  ಸ್ವೀಕರಿಸಿದ್ದ ಪರಿವ್ರಾಜಕೆ ರಾಜಮ್ಮಾಳ್. ಡಾ. ಎನ್.ರಾಧಾಕೃಷ್ಣನ್ ಮತ್ತು ಹರ್ಷಾದ್ ವರ್ಕಾಡಿಯವರ ನೇತೃತ್ವದ ವಿನೋಬಾ- ವೆಂಕಟೇಶ್ ರಾವ್ ಶಾಂತಿಸೇನಾ ಫೌಂಡೇಶನ್ ಗೆ ಅದೇ ಸ್ಥಳದಲ್ಲಿ ಪ್ರತಿ ಜ್ಞೆ ಬೋಧಿಸುವ ಮೂಲಕ ಶಾಂತಿಸೇನೆಯ ಚಟುವಟಿಕೆಗಳನ್ನು ಈ ತಲೆಮಾರಿಗೆ ಹಸ್ತಾಂತರಿಸಿದ್ದರು.
    ಭೂದಾನ ಚಳವಳಿಯ ವೈಫಲ್ಯ ಮತ್ತು ಗಾಂಧೀ ಚಿಂತನಧಾರಾ ಕಾರ್ಯಕರ್ತರ ಮಧ್ಯೆ ಉಂಟಾಗಿರುವ ಭಿನ್ನತೆ ಹಾಗೂ  ಸೈದ್ಧಾಂತಿಕ ಗೊಂದಲಗಳ ಕಾರಣಗಳಿಂದ ಶಾಂತಿಸೇನಾ ಕಾರ್ಯ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿರುವುದು ಮತ್ತು ಇತಿಹಾಸದ ಪುಟಗಳಲ್ಲಿ ಲೀನವಾಗುವ ದುಃಖಕರ ಸನ್ನಿವೇಶದಲ್ಲಿ ಗಾಂಧಿವಾದಿಗಳು ದ್ವನಿ ಕಳೆದುಕೊಂಡ ನಿರಾಶಾಜನಕ ಕಾಲವಿದು.
    ನಮ್ಮ ಸುತ್ತಲೂ ಹೆಚ್ಚುತ್ತಿರುವ ಹಿಂಸೆ, ಕೊಲೆಪಾತಕ ಇತ್ಯಾದಿಗಳಿಗೆದುರಾಗಿ ಕನಿಷ್ಠ ಪ್ರತಿಕ್ರಿಯಿಸಲೂ ಕೂಡಾ ಅಸಾಧ್ಯವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ 1957 ಆಗಸ್ಟ್ 23 ರಂದು ಮಂಜೇಶ್ವರದಲ್ಲಿ ಕೈಗೊಳ್ಳಲಾದ ಶಾಂತಿಸೇನೆಯ ಪ್ರತಿ ಜ್ಞೆ ಯನ್ನು ಮರು ಸ್ಥಾಪಿಸುವ ಮೂಲಕ ಶಾಂತಿ ಸ್ಥಾಪನೆಯ ಮಹತ್ಕಾರ್ಯಕ್ಕೆ ಮರು ರೂಪು ನೀಡಬೇಕಾಗಿದೆ. ಶಾಂತಿ ಸೇನೆ ಹಾಗೂ ಗಾಂಧಿ ಸಂದೇಶಗಳನ್ನು ಮರುವ್ಯಾಖ್ಯಾನಿಸಿ ಗಾಂಧೀಜಿಯವರನ್ನು ಕಂಡು ಕೇಳರಿಯದ ಹೊಸ ತಲೆಮಾರಿಗೆ ಸ್ವೀಕೃತವಾಗುವ ರೀತಿಯ ಕಾರ್ಯಕ್ರಮಗಳನ್ನು ಆವಿಷ್ಕರಿಸಬೇಕಾದುದರ ಅನಿವಾರ್ಯತೆಯ ಕುರಿತಾಗಿ ವಿಸ್ತೃತ ಚರ್ಚೆ ನಡೆಸಬೇಕಾದ ಸಮಯ ಸನ್ನಿಹಿತವಾಗಿದೆ.
   ಈ ಉದ್ದೇಶದಿಂದ ಕೇರಳದ ವಿವಿಧ ಪ್ರದೇಶಗಳ ಸಾಮಾಜಿಕ ಕಾರ್ಯಕರ್ತರ ಸಮಾಲೋಚನಾ ಸಭೆ ಹಾಗೂ ವಿನೋಭಾ- ವೆಂಕಟೇಶ್ ರಾವ್ ಶಾಂತಿಸೇನಾ ಫೌಂಡೇಶನ್ ನ ವಾರ್ಷಿಕ ಅವಲೋಕನಾ ಸಭೆ ಇಂದು  ಬೆಳಿಗ್ಗೆ 10 ಗಂಟೆಗೆ  ಶಾಂತಿಸೇನಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎನ್.ರಾಧಾಕೃಷ್ಣನ್ ಅಧ್ಯಕ್ಷತೆಯಲ್ಲಿ ಹೊಸಂಗಡಿ ಗೇಟ್ ವೇ ಹಾಲ್ ಸಭಾಂಗಣದಲ್ಲಿ ನಡೆತಯಲಿದೆ.
     ಕೇರಳದಲ್ಲಿ ಹೆಚ್ಚುತ್ತಿರುವ ಹಿಂಸೆ, ಕೊಲೆಪಾತಕ, ಮದ್ಯ ಹಾಗೂ ಮಾದಕ ವಸ್ತುಗಳ ಅನಿಯಂತ್ರಿತ ಬಳಕೆಗಳನ್ನು ಕೊನೆಗೊಳಿಸುವ ಕುರಿತಾಗಿ ಚರ್ಚೆ ನಡೆಸುವುದರ ಜೊತೆಗೇ ಗಾಂಧೀಜಿಯವರ ಶಾಂತಿಸೇನಾ ಚಟುವಟಿಕೆಗಳ ಮೂಲಕ ನಾಡಿನಲ್ಲಿ ಶಾಂತಿ ಹಾಗೂ ನೆಮ್ಮದಿ ಪುನಃಸ್ಥಾಪಿಸುವ ಕುರಿತು ಕೂಡಾ ಚರ್ಚೆ ನಡೆಸಲಿದೆ.
ಗಾಂಧೀಜಿಯವರ 150 ನೇ ಜನ್ಮ ವಾರ್ಷಿಕ ಸಂದರ್ಭದಲ್ಲಿ ನಡೆಯುತ್ತಿರುವ ಈ ಮಹತ್ವದ ಸಭೆಯಲ್ಲಿ ಭಾಗವಹಿಸಿ ತಮ್ಮ ಮೌಲ್ಯಯುತ  ಸಲಹೆಗಳನ್ನು ನೀಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries