ಕಾಸರಗೋಡು: ಸಿರಿ ಚಂದನಕನ್ನಡಯುವ ಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ಸರಣಿ ಕಾರ್ಯಕ್ರಮವಾಗಿ ಮುನ್ನಡೆಯುತ್ತಿರುವ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಹದಿನಾರನೆಯ ಕಾರ್ಯಕ್ರಮವು ಕಾಸರಗೋಡು ನಗರ ಸಮೀಪದ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ನಾಳೆ (ಜೂನ್9)ರಂದು ಭಾನುವಾರ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ. ಕನ್ನಡ ಜಾಗೃತಿ ಉಪನ್ಯಾಸ, ತಾಳಮದ್ದಳೆಯ ಜೊತೆಗೆ ಇತ್ತೀಚೆಗೆ ನಿಧನರಾದ ಯಕ್ಷಗಾನ ಆಹಾರ್ಯದ ಮೇರು ಕಲಾವಿದ ದೇವಕಾನ ಕೃಷ್ಣ ಭಟ್ ಅವರ ಸಂಸ್ಮರಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಹರಿದಾಸ ಜಯಾನಂದಕುಮಾರ್ ಹೊಸದುರ್ಗ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಸಿರಿಚಂದನ ಬಳಗದ ಸದಸ್ಯ ಹಾಗೂ ಬಿಎಡ್ ವಿದ್ಯಾರ್ಥಿ ಬಾಲಕೃಷ್ಣ ಬೆಳಿಂಜ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ದೇವಕಾನ ಕೃಷ್ಣ ಭಟ್‍ಇವರ ಸಂಸ್ಮರಣೆ ಮಾಡುವರು. ಮಂಗಳೂರು ಪಿ.ಎಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಹಾಗೂ ಸಿರಿಚಂದನ ಬಳಗದ ಯುವಕಲಾವಿದ ಶಶಿಧರ ಕುದಿಂಗಿಲ ಇವರು ಕನ್ನಡಜಾಗೃತಿ ಉಪನ್ಯಾಸ ನೀಡುವರು. ಶ್ರೀ ರಾಮನಾಥ ಸಾಂಸ್ಕøತಿಕ ಭವನದ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಇವರು ಶುಭಾಶಂಸನೆ ಮಾಡಲಿರುವರು. ಕುಮಾರಿತ್ರಿಶಾ, ಪ್ರದೀಪ್‍ಕುಮಾರ್‍ಎಡನೀರು, ಸಂದೇಶ್‍ಎನ್ ಹಾಗೂ ಬಳಗದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿರುವರು.
ಬಳಿಕ ಯಕ್ಷಗಾನದ ಹಿರಿಯಕಲಾವಿದ ದಿವಾಣ ಶಿವಶಂಕರ ಭಟ್ ಹಾಗೂ ಡಾ. ರತ್ನಾಕರ ಮಲ್ಲಮೂಲೆಅವರ ಮಾರ್ಗದರ್ಶನದಲ್ಲಿ ಸಿರಿ ಚಂದನಕನ್ನಡಯುವ ಬಳಗದ ಸದಸ್ಯರಿಂದ'ಜಾಂಬವತಿಕಲ್ಯಾಣ' ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸಚಿನ್ ಶೆಟ್ಟಿಕುದ್ರೆಪ್ಪಾಡಿ,ಚೆಂಡೆ ಮತ್ತು ಮದ್ದಳೆಯಲ್ಲಿ ಪುಂಡಿಕೈರಾಜೇಂದ್ರ ಪ್ರಸಾದ್ ಮತ್ತುಶ್ರೀಸ್ಕಂದ ದಿವಾಣ ಸಹಕರಿಸುವರು. ಮುಮ್ಮೇಳದಲ್ಲಿ ಬಲರಾಮನಾಗಿ ನವೀನ ಕುಂಟಾರು, ನಾರದನಾಗಿಕಾರ್ತಿಕ್ ಪಡ್ರೆ, ಕೃಷ್ಣನಾಗಿ ಶಶಿಧರ ಕುದಿಂಗಿಲ, ಜಾಂಬವಂತನಾಗಿದಿವಾಕರ ಬಲ್ಲಾಳ ಎ.ಬಿ ಪಾತ್ರ ನಿರ್ವಹಿಸುವರು.ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.