HEALTH TIPS

ಚಿನ್ಮಯ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ- ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವವಾದುದು : ಯೋಗಾಚಾರ್ಯ ಶಿವರಾಮ ಭಟ್

 
          ಕಾಸರಗೋಡು: ಭಾರತೀಯ ಪರಂಪರೆಯಲ್ಲಿ ಇಂದಿಗೂ ಉಳಿದು  ವಿಶ್ವ ವಿಖ್ಯಾತಿ ಹೊಂದಿದ ಅತಿ ಶ್ರೇಷ್ಠ ಸಂಪತ್ತಾಗಿದೆ ಯೋಗ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಸಾರ, ಧಾರಣ ಧ್ಯಾನ, ಸಮಾ„ಗಳ ಮೂಲಕ ಬಾಹ್ಯ ಹಾಗೂ ಆಂತರ್ಯ ಸಾಧನಗಳಲ್ಲಿ ಶಿಸ್ತನ್ನು ಅಳವಡಿಸಿ ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವವಾದುದು ಎಂದು ಯೋಗಾಚಾರ್ಯ ಶಿವರಾಮ ಭಟ್ ಅಭಿಪ್ರಾಯಪಟ್ಟರು.
         ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಗೆ ಸಂಬಂ„ಸಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 25 ವರ್ಷಗಳ ತನ್ನ ಯೋಗಾಭ್ಯಾಸದ ಅನುಭವವನ್ನು ಹಂಚಿಕೊಂಡರು.
         ಜೀವನದಲ್ಲಿ ಎಲ್ಲ ಸುಖಗಳನ್ನು ಅನುಭವಿಸುತ್ತಾ ಅನಾರೋಗ್ಯಕ್ಕೆ ದಾಸರಾಗುವವರು ಕೊನೆಗೆ ಮೊರೆ ಹೋಗುವುದು ಯೋಗಕ್ಕೆ. ಈಗ ವರ್ಷದಿಂದ ವರ್ಷಕ್ಕೆ ಯೋಗಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ ಯೋಗವನ್ನು ಅಭ್ಯಸಿಸುವವರಿಗೆ ಮಾತ್ರ ಶಾರೀರಿಕ ಮಾನಸಿಕ ಆಧ್ಯಾತ್ಮಿಕತೆಗಳ ಸಮ್ಮಿಲನವನ್ನು ಪತಂಜಲಿಯ ಯೋಗ ಸೂತ್ರದಿಂದ ಗಳಿಸಬಹುದು ಎಂಬುದು ಸ್ವತ: ಅನುಭವಕ್ಕೆ ಬರುವುದು ಎಂದರು.
        ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಸಭೆಯನ್ನುದ್ದೇಶಿಸಿ ಮಾತನಾಡಿ, ಜೂನ್ 21 ನ್ನೇ ಯೋಗ ದಿನವನ್ನಾಗಿ ನಮ್ಮ ಪ್ರಧಾನ ಮಂತ್ರಿಗಳು ಆಯ್ಕೆ ಮಾಡಿದುದರ ಹಿನ್ನೆಲೆಯ ಬಗ್ಗೆ ತಿಳಿಸಿದರು. ಮೊದಲನೆಯದಾಗಿ ಅಂದು ಮಹರ್ಷಿ ಪತಂಜಲಿಯ ಜನ್ಮದಿನ ಜೂನ್ 21 ರಂದು. ಅತ್ಯಂತ ದೀರ್ಘ ದಿನವೂ ಆಗಿದೆ. ಪ್ರಾಚೀನ ಭಾರತೀಯರು ಮನಸ್ಸು ಶರೀರಗಳಿಗೆ ಸಂಬಂಧವಿಲ್ಲ. ಅವು ಪರಸ್ಪರ ಸಂ„ಸಿದರೆ ಸಂದಿಗ್ಧಗಳಿಗೆ ಎಡೆಯಾಗುವುದೆಂಬುದನ್ನು ನಿರಾಕರಿಸಿದ ಸಂಶೋಧಕರು ಮನಸ್ಸು ಹಾಗು ಶರೀರಕ್ಕೆ ನಿಕಟವಾದ ಸಂಬಂಧವಿದೆ. ಅವೆರಡು ಪರಸ್ಪರ ಜೊತೆಯಾಗಿ ಕಾರ್ಯ ಪ್ರವೃತ್ತಗೊಂಡರೆ ಮಾನಸಿಕ ಶಾರೀರಿಕ ಹಾಗು ಬೌದ್ಧಿಕ ಸಮೀಕರಣ ಏರ್ಪಡುವುದು ಎಂದು ಸಾ„ಸಿ ತೋರಿಸಿದರು. ಆದುದರಿಂದಲೇ ಭಾರತೀಯ ಪರಂಪರೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಯೋಗವನ್ನು ಪತಂಜಲಿಯವರು ಶಾಸ್ತ್ರೀಕರಿಸಿ ಜಗತ್ತಿಗೆ ಯೋಗ ಶಾಸ್ತ್ರವನ್ನು ಅದರಿಂದಾಗುವ ಪ್ರಯೋಜನಗಳನ್ನೂ ಪರಿಚಯಿಸಿದರು. ಇದನ್ನು ಮನಗಂಡ ಯೋಗ ಶಿಕ್ಷಣವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದರು. ಸಿ.ಬಿ.ಎಸ್.ಇ. ಪಠ್ಯ ಪದ್ಧತಿಯಲ್ಲಿ ಯೋಗಕ್ಕೆ ಒಂದು ಪ್ರತ್ಯೇಕ ವೇಳೆಯನ್ನೇ ನಿಗದಿ ಪಡಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಶಾರೀರಿಕ ಮಾನಸಿಕ ಬೌದ್ಧಿಕ ಬೆಳವಣಿಗೆಗಾಗಿ ಯೋಗಾಭ್ಯಾಸ ಅನಿವಾರ್ಯ ಎಂದು ಸಾರಿದರು.
      ವಿದ್ಯಾರ್ಥಿಗಳು ಯೋಗಾಸನದ ವಿವಿಧ ಭಂಗಿಗಳನ್ನು ಅಷ್ಟಾಂಗ ಯೋಗದ ಮಹತ್ವವನ್ನು ಸಾರುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಆಯಿಷತ್ ಹುದ ಕಾರ್ಯಕ್ರಮವನ್ನು ನಿರೂಪಿಸಿದರು. ಆಯಿಷ ಅಫ್ನ ಸ್ವಾಗತಿಸಿದರು. ಸಾಹಿಲ್ ಫರ್ದೀನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries