HEALTH TIPS

ನಾಸ್ತಿಕ ಯುವತಿಯರನ್ನು ಕ್ಷೇತ್ರಕ್ಕೆ ಪ್ರವೇಶಿಸಲು ಮುಂದಾದ ಸರಕಾರಕ್ಕೆ ಮತದಾರ ಸೂಕ್ತ ಉತ್ತರ- ವಿ.ಕೆ. ಸಜೀವನ್

       
       ಉಪ್ಪಳ:  ಶಬರಿಮಲೆ ಶ್ರೀ ಅಯ್ಯಪ್ಪನ ಬ್ರಹ್ಮಚರ್ಯೆಯನ್ನು ಕೆಡಿಸಲು ನಾಸ್ತಿಕ ಯುವತಿಯರನ್ನು ಬಲವಂತವಾಗಿ ಕ್ಷೇತ್ರಕ್ಕೆ ಪ್ರವೇಶಿಸಲು ಮುಂದಾದ ಎಡರಂಗ ಸರ್ಕಾರಕ್ಕೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ. ಸಿ.ಪಿ.ಎಂ.ಪಕ್ಷದ ಹಿಂಸೆಯ ಭಯದಲ್ಲಿ ಅಭಯದ ಆಶ್ರಯ ಪಡೆಯಲು ರಾಜ್ಯದ ನಿಷ್ಪಕ್ಷ ಮತದಾರರು ಕೇರಳದಲ್ಲಿ ಐಕ್ಯರಂಗಕ್ಕೆ ಮತ ನೀಡಿರುವರು.ಅಲ್ಲದೆ ಸಿಪಿಎಂ ಮತಗಳು ಐಕ್ಯರಂಗದ ಪಾಲಾದವು.ಈ ಕಾರಣದಿಂದ ರಾಜ್ಯದಲ್ಲಿ ಮಾತ್ರ 20 ರಲ್ಲಿ 19 ಸ್ಥಾನ ಪಡೆಯಲು ಐಕ್ಯರಂಗಕ್ಕೆ ಸಾಧ್ಯವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ. ಸಜೀವನ್ ಹೇಳಿದರು.
    ಪೈವಳಿಕೆ ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ಬಾಯಾರು ಪದವಿನಲ್ಲಿ ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
       ಲೋಕಸಭಾ ಚುನಾವಣೆಯಲ್ಲಿ ದೇಶದ 6 ರಾಜ್ಯಗಳಲ್ಲಿ 100 ಶೇ.,13 ರಾಜ್ಯಗಳಲ್ಲಿ 50 ಶೇಕಡ ಬಿಜೆಪಿ ಮತ ಪಡೆದಿದೆ.ಕಾಂಗ್ರೆಸ್ಸ್ ಆಳುವ ರಾಜಸ್ಥಾನ ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಜೇಯ ಜಯಗಳಿಸಿದೆ. 8 ಶೇಕಡ ಅಲ್ಪಸಂಖ್ಯಾತರ ಮತದೊಂದಿಗೆ ದೇಶದಾದ್ಯಂತ 28 ಕೋಟಿ ಮತ ಪಡೆದು 303 ಸ್ಥಾನಗಳೊಂದಿಗೆ ಪಕ್ಷ ಅಧಿಕಾರಕ್ಕೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಅಪಪ್ರಚಾರದ ಮೂಲಕ ಸೋಲಿಸಲು ಪ್ರತಿಪಕ್ಷ ಮತ್ತು ಕೆಲವು ಮಾಧ್ಯಗಳು ಶ್ರಮಿಸಿದರೂ ವಿಫಲವಾಗಿ ಪ್ರದಾನಿ ಮೋದಿಯವರು ಮತ್ತೆ ವಿಶ್ವಮಟ್ಟದಲ್ಲಿ ಸಮರ್ಥ ನಾಯಕನಾಗಿ ಮಿಂಚಿ ಜನಪ್ರಿಯರಾಗಿರುವರು ಎಂದು ಅವರು ತಿಳಿಸಿದರು.
      ಪಕ್ಷದ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿದರು.  ಪೈವಳಿಕೆ ಪಂಚಾಯತ್ ಬಿಜೆಪಿ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಸುನಿಲ್ ಪ್ರಚಲಿತ ರಾಜಕೀಯದ ಕುರಿತು ಮಾತನಾಡಿದರು.ಪಕ್ಷದ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ,ರಾಜ್ಯ ಕೌನ್ಸಿಲ್ ಸದಸ್ಯೆ ಸರೋಜಾ ಆರ್.ಬಲ್ಲಾಳ್,ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಸತ್ಯಶಂಕರ ಭಟ್,ಜಿಲ್ಲಾ ಸಮಿತಿ ಸದಸ್ಯ ಎಂ.ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು.ಎ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಗೋಪಾಲ ಸಪಲ್ಯ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries