ಕುಂಬಳೆ: ಸೈಂಟ್ ಮೋನಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ಮೊದಲ ಸಭೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಫಾದರ್ ಅನಿಲ್ ಪ್ರಕಾಶ್ ಡಿ'ಸಿಲ್ವ ಪುಣಿಯೂರ್, ಐರಿನ್ ರೋಡ್ರಿಗಸ್ ಉಪಸ್ಥಿತರಿದ್ದರು. ಅತಿಥಿಯಾಗಿ ಬೇಳ ಸೈಂಟ್ ಮೇರಿ ಬರ್ತಲೋಮಿಯೋ ಕಪಿತಾನಿಯೋ ಶಾಲೆಯ ಶಿಕ್ಷಕ ಸ್ಟೇನಿ ಲೋಬೊ ಕಲ್ಲಕಟ್ಟ ಉಪಸ್ಥಿತರಿದ್ದು, ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಫಾದರ್ ಅನಿಲ್ ಪ್ರಕಾಶ್ ಡಿ'ಸಿಲ್ವ ಅವರು ಶಾಲೆಯ ನಿಯಮಗಳು, ಯೋಜನೆಗಳು ಹಾಗೂ ಕಾರ್ಯಸೂಚಿಗಳನ್ನು ತಿಳಿಸಿದರು. ಶಿಕ್ಷಕ ರಕ್ಷಕ ಸಂಘದ ಪ್ರತಿನಿಧಿಗಳನ್ನು ಇದೇ ಸಂದರ್ಭದಲ್ಲಿ ಆರಿಸಲಾಯಿತು.