ಬದಿಯಡ್ಕ : ಬೆಂಗಳೂರು ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಕನ್ನೆಪ್ಪಾಡಿ ಆಶ್ರಯ ಸೇವಾಶ್ರಮದಲ್ಲಿ ಶಿಶುಮಂದಿರದ ಮಕ್ಕಳೊಂದಿಗೆ ಬುಧವಾರ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಾಪಿಕೆ ಜ್ಯೋತಿ ಪರಿಸರ ಜಾಗೃತಿಯ ಕುರಿತು ಮಕ್ಕಳಿಗೆ ವಿವರಣೆಯನ್ನು ನೀಡಿದರು. ನಂತರ ಆಶ್ರಮದ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.