ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಮೀಪವಿರುವ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ವತಿಯಿಂದ ಡಿಸಂಬರ್ ತಿಂಗಳಲ್ಲಿ ಜರಗಲಿರುವ 55 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವಕ್ಕೆ ನಿಧಿ ಸಂಗ್ರಹಣಾರ್ಥ ಅದೃಷ್ಟ ಚೀಟಿ ಯೋಜನೆಯನ್ನು ಭಜನಾ ಮಂದಿರದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಸೇವಾ ಸಂಘದ ಅಧ್ಯಕ್ಷ ಉದ್ಯಮಿ ಸುರೇಶ್, ಉಪಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಕೋಶಾಧಿಕಾರಿ ಅನಂತರಾಜ್, ಬಾಲಕೃಷ್ಣ ಗುರುಸ್ವಾಮಿ ಹಾಗು ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.