ಮುಳ್ಳೇರಿಯ: ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಸಂಗೀತ ದಿನ ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಉದ್ಘಾಟಿಸಿದರು. 2019ರ ಉತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ `ಬಿಲತ್ತಿಕ್ಕುಳಲ್' ಮಲಯಾಳ ಕಿರುಚಿತ್ರದ ನಟಿ ಹಾಗೂ ಬೆಳ್ಳೂರು ಶಾಲೆಯ ಹಿರಿಯ ಪ್ರಾಥಮಿಕ ವಿಭಾಗ ಶಿಕ್ಷಕಿ ಜಯ ರಂಜಿತಾ, ಶಿಕ್ಷಕ ಪ್ರವೀಣ್ ಹಾಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಮೇರಿಕಾದ ಸಂಗೀತ ತಜ್ಞ ಜೋಯಲ್ ಕೋಯನ 1976ರಲ್ಲಿ ಮೊತ್ತಮೊದಲ ಬಾರಿ ಸಂಗೀತ ದಿನವನ್ನು ಆಚರಿಸಿದ್ದು, ದಿನಾಚರಣೆಯಂದು ಯಾವುದೇ ಸ್ಥಳದಲ್ಲಿ ಸಂಗೀತವನ್ನು ಹಾಡಬಹುದು ಎಂದು ತಿಳಿಸಿದ್ದರು. ಜೋಯಲ್ ಕೋಯನ ಆಶಯ ಅಮೇರಿಕಾದಲ್ಲಿ ಫಲಪ್ರದವಾಗಿಲ್ಲವಾದರೂ ಆರು ವರ್ಷಗಳ ಬಳಿಕ ಫ್ರಾನ್ಸ್‍ನಲ್ಲಿ ಈ ದಿನವನ್ನು ಆಚರಿಸಲಾಗಿತ್ತು. ಫ್ರೆಂಚ್ ಮಂತ್ರಿಸಭೆಯ ಸಾಂಸ್ಕøತಿಕ ಮಂತ್ರಿಯಾಗಿದ್ದ ಜಾಕ್ ಲಾಂದ್ ಸಂಗೀತ ದಿನವನ್ನು ನಿರ್ದೇಶಿಸಿದ್ದು 1982ರ ಬಳಿಕ ಫ್ರಾನ್ಸ್ ದೇಶದಲ್ಲಿ ದಿನಾಚರಣೆ ನಡೆಯುತ್ತಿದೆ. ಪ್ರಪಂಚದ ನೂರಕ್ಕೂ ಅಧಿಕ ರಾಷ್ಟ್ರಗಳು ವಿವಿಧ ರೀತಿಗಳಲ್ಲಿ ಸಂಗೀತ ದಿನಾಚರಣೆ ಆಚರಿಸುತ್ತಿದೆ.