HEALTH TIPS

ಕನ್ನಡದ ಮೊದಲ ಪತ್ರಿಕೆ ಹುಟ್ಟಿದ ದಿನ ಇಂದು!-ಕನ್ನಡ ಮಾಧ್ಯಮ ಯುಗದ ಜನ್ಮ ವೃತ್ತಾಂತ

           
       ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ.  1843 ಜುಲೈ 1ರಂದು ಇದರ ಮೊದಲ ಸಂಚಿಕೆ ಪ್ರಾರಂಭವಾಯಿತು. ಇದಕ್ಕಾಗಿಯೇ ಕರ್ನಾಟಕದಲ್ಲಿ ಪತ್ರಿಕಾ ದಿನವನ್ನು ಜುಲೈ ಒಂದರಂದು ಆಚರಿಸುತ್ತಾರೆ. ಈ ಪತ್ರಿಕೆಯು ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಆಯಿತು. ಕೆಲವು ತಿಂಗಳುಗಳ ಕಾಲ ಇಲ್ಲಿಯೇ ಮುದ್ರಣಗೊಳ್ಳುತ್ತಿದ್ದ ಈ ಪತ್ರಿಕೆಗೆ ಹೆಚ್ಚಿನ ಬೇಡಿಕೆ ಬಂದದ್ದರಿಂದ ಬಳ್ಳಾರಿಗೆ ಸ್ಥಳಾಂತರಿಸಲ್ಪಟ್ಟು ಕಂನಡ ಸಮಾಚಾರ ವೆಂಬ ಹೆಸರಿನಿಂದ ಲಂಡನ್ ಮಿಶನ್ ಪ್ರೆಸ್ನಲ್ಲಿ ಮುದ್ರಣಗೊಳ್ಳುತ್ತಿತ್ತು. ಆಗ ಮಂಗಳೂರಿನಲ್ಲಿ ಕಲ್ಲಚ್ಚು ಮುದ್ರಣದ ವ್ಯವಸ್ಥೆ ಮಾತ್ರ ಇತ್ತು. 1817ರ ಸುಮಾರಿಗೆ ಕನ್ನಡಕ್ಕೆ ಮತ್ತು ತೆಲುಗು ಬಾಷೆಯ ಮುದ್ರಣಕ್ಕೆ ಒಂದೇ ಆಚ್ಚುಮೊಳೆಗಳನ್ನು ಬಳಸುತ್ತಿದ್ದರು. ಬಳ್ಳಾರಿ ಲಂಡನ್ ಮಿಶನ್ ಪ್ರೆಸ್ ನಲ್ಲಿ ಈ ಮುದ್ರಣ ನಡೆಯುತ್ತಿತ್ತು.
       1843 ಜುಲೈ 1ರಂದು ಕಲ್ಲಚ್ಚಿನಲ್ಲಿ ಮುದ್ರಣಗೊಂಡ ಮಂಗಳೂರು ಸಮಾಚಾರ ಪತ್ರಿಕೆಗೆ ಇಂದಿಗೆ 176 ವರ್ಷ ಸಂದವು. ಮದ್ರಾಸ್ ಆದಿಪತ್ಯಕ್ಕೆ ಸೇರಿದ ತುಳುನಾಡು ಆಂಗ್ಲರ ಆಳ್ವಿಕೆಯ ಕಾಲದಲ್ಲಿ ವಿದ್ಯೆ, ಕೈಗಾರಿಗೆ, ವ್ಯಾಪಾರ, ಬೇಸಾಯ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರೂ 1896ರ ತನಕವೂ ಪತ್ರಿಕೋದ್ಯಮಕ್ಕೆ ಹೆಜ್ಜೆ ಇಟ್ಟಿರುವುದು ಕಂಡು ಬರುವುದಿಲ್ಲ. 1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು 1841ರಲ್ಲಿ ಸ್ಥಾಪಿಸಿದ ತುಳು ನಾಡಿನ ಮೊದಲ ಮುದ್ರಣಾಲಯವಾದ ಬಾಸೆಲ್ ಮಿಶನ್ ಪ್ರೆಸ್ ನಲ್ಲಿ  1843ರಲ್ಲಿ ಮೊದಲ ಕನ್ನಡ ಪತ್ರಿಕೆ "ಮಂಗಳೂರು ಸಮಾಚಾರ" ಮುದ್ರಣಗೊಂಡಿತು.
       ಮಿಶನರಿಗಳು ಈ ಪತ್ರಿಕೆಯನ್ನು ತಮ್ಮ ಮತ ಪ್ರಚಾರಕ್ಕಾಗಿ ಬಳಸಿಕೊಳ್ಳಬಹುದಾಗಿತ್ತು. ಹಾಗೇ ಮಾಡದೇ ಇದ್ದುದರಿಂದ ಈ ಪತ್ರಿಕೆಯು ಜಾತ್ಯಾತೀತ ಪತ್ರಿಕೆಯಾಗಿ ನಿಂತಿತು. ಕ್ರೈಸ್ತ ಮತದ ವಿಚಾರಗಳು ಆ ಪತ್ರಿಕೆಯಲ್ಲಿ ಬಳಕೆಯಾದ ಸಂದರ್ಭಗಳೆಂದರೆ ದಾಸರ ಪದಗಳ ವಿವರಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ನೀಡಿರುವುದು. 1850ರಲ್ಲಿ ಹೆರ್ಮನ್ ಮ್ಯೋಗ್ಲಿಂಗ್ ಸಂಪಾದಿಸಿದ ದಾಸರ ಪದಗಳು ಪುಸ್ತಕ ರೂಪದಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಪ್ರಕಟಗೊಂಡರೂ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮಥ ಮುದ್ರಣ ರೂಪದಲ್ಲಿ ಬಂದುದು ಮಂಗಳೂರು ಸಮಾಚಾರದಲ್ಲಿಯೇ. 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಬಿರುಚಿ ಉಂಟು ಮಾಡಿದರೂ ಸುಮಾರು 50 ವರ್ಷಗಳ ವರೆಗೆ ಪತ್ರಿಕೋದ್ಯಮ ಅಭಿವೃದ್ದಿಗೊಂಡದ್ದು ಕಂಡುಬರುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಕೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಮಹತ್ವದ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ, ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಬಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು. ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು.
       1943 ಜುಲೈ 1.ರ ಮೊದಲ ಪತ್ರಿಕೆಯ ಮಾರಾಟ ಬೆಲೆ ಒಂದು ದುಡ್ಡು. 1844 ಫೆಬ್ರವರಿ ತನಕ ಮಾತ್ರ ಮುನ್ನಡೆದ ಈ ಪತ್ರಿಕೆಯನ್ನು ಮೊದಲಿಗೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡು ಬಾರಿ  ಪ್ರಕಟವಾಗುತ್ತಿತ್ತು. ಪತ್ರಿಕೆಯ ಓದುಗರು ಹೆಚ್ಚಾದಂತೆ ಹಾಗೂ ಮಂಗಳೂರಿನಲ್ಲಿ ಕಲ್ಲಚ್ಚು ಮುದ್ರಣದ ವ್ಯವಸ್ಥೆ ಮಾತ್ರ ಇದ್ದು ಹೆಚ್ಚಿನ ಪ್ರತಿಗಳ ಮುದ್ರಣಕ್ಕಾಗಿ ಬಳ್ಳಾರಿಗೆ ಸ್ಥಳಾಂತರ ವಾಯಿತು. 1821ರಲ್ಲಿ ಬಳ್ಳಾರಿಯಲ್ಲಿ ಸ್ಥಾಪನೆಯಾದ ಲಂಡನ್ ಮಿಶನ್ ಪ್ರೆಸ್ ನಲ್ಲಿ ಅಚ್ಚು ಮೊಳೆಗಳನ್ನು ಬಳಸಿಕೊಂಡು ಮುದ್ರಣ ಮಾಡುತ್ತಿದ್ದರು ಅ ಸಮಯದಲ್ಲಿ ಕನ್ನಡ ಮತ್ತು ತೆಲುಗು ಮುದ್ರಣಕ್ಕೆ ಒಂದೇ ಆಕ್ಷರ ಮೊಳೆಗಳನ್ನು ಬಳಸುತ್ತಿದ್ದರು.ಇದೇ ಮುದ್ರಣಾಲಯದಲ್ಲಿ ಜೂನ್ 1844ರಿಂದ ನವೆಂಬರ್ ತನಕ ಹೆರ್ಮನ್ ಮ್ಯೋಂಗ್ಲಿಂಗ್ ರವರ ಸಂಪಾದಕತ್ವದಲ್ಲಿಯೇ ಕನ್ನಡ ಸಮಾಚಾರ ಎಂಬ ಹೆಸರಿನೊಂದಿಗೆ ಪ್ರಕಟಗೊಳ್ಳುತ್ತಿತ್ತು. ಮಂಗಳೂರು ಸಮಾಚಾರ ಪತ್ರಿಕೆಯ ಸಂಪಾದಕರಾದ ಹೆರ್ಮನ್ ಪ್ರೆಡ್ರಿಕ್ ಮ್ಯೋಗ್ಲಿಂಗ್ ರವರು ಹುಟ್ಟಿದ್ದು 1811 ಮೇ ತಿಂಗಳ 29ನೇ ತಾರೀಕಿನಂದು ವ್ಯುಟೆಂಬರ್ ನ ಪ್ರಕ್ಕಸ್ ಹೈಮ್ ಎಂಬ ಊರಲ್ಲಿ. ಲ್ಯಾಟಿನ್ ಭಾಷೆಯಲ್ಲಿ ಅಸಾಧಾರಣವಾದ ಸಾಮಥ್ರ್ಯ ಹೊಂದಿದ್ದ ಈತ 12 ವರ್ಷ ಬಾಲಕನಿರುವಾಗ ಒಂದು ಪರೀಕ್ಷೆಗೆ ಹೋದಾಗ ಅದ್ಯಾಪಕರೊಬ್ಬರು ಜರ್ಮನ್ ಭಾಷೆಯಲ್ಲಿ ಕಠಿಣವಾದ ಒಂದು ಪರಿಚ್ಛೇದವನ್ನು ಬರಸಿದರು. ಕ್ಷಣಮಾತ್ರದಲ್ಲಿ ಅದನ್ನು ಬಾಷಾಂತರಿಸಿ ಉಪಾದ್ಯಾಯರ ಕೈಯಲ್ಲಿ ಕೊಟ್ಟನು. ಇತರ ಹುಡುಗರು ಅದೇ ಪರಿಚ್ಛೇದವನ್ನು ಜರ್ಮನ್ ಭಾಷೆಯಲ್ಲಿ ಬರಿಯುವಷ್ಟರೊಳಗೆ ಮ್ಯೋಂಗ್ಲಿಂಗನು ಅದನ್ನು ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದ್ದನ್ನು ನೋಡಿ ಉಪಾದ್ಯಾಯರು ಬೆರಗಾಗಿ ಬೇಷ್ ಅನಿಸಿಕೊಂಡನು. ¨                  sಭಾಷಾಬ್ಯಾಸಕ್ಕೆ ಹೆಚ್ಚು ಗಮನ ಕೊಡುತ್ತಿದ್ದ ಈತ ತಂದೆಗೆ ಲ್ಯಾಟಿನ್ ಬಾಷೆಯಲ್ಲಿಯೂ, ತಾಯಿಗೆ ಜರ್ಮನ್ ಭಾಷೆಯಲ್ಲಿಯೂ ಪತ್ರ ಬರೆಯುತ್ತಿದ್ದನಂತೆ. ಮಿಶನರಿಯಾಗಬೇಕೆಂಬ ಮನದಾಶೆಯಿಂದ ಬಾಸೆಲ್ ನಲ್ಲಿ ದೈವ ಜ್ಞ ನ ತರಬೇತಿಗೆ ಸೇರಿದ ಮೋಗ್ಲಿಂಗ್ ತನ್ನ ವಿದ್ಯಾಭ್ಯಾಸದೊಂದಿಗೆ ಅರಬಿ, ಸಂಸ್ಕøತ, ಇಂಗ್ಲಿಷ್ ಭಾಷೆಯನ್ನೂ ಕಲಿಯಲಾರಂಭಿಸಿದ. 1836ರಲ್ಲಿ ಭಾರತಕ್ಕೆ ಬಂದು ಬಾಸೆಲ್ ಮಿಶನ್ ಕೇಂದ್ರವಾಗಿರುವ ಧಾರವಾಡದಲ್ಲಿದ್ದು 1841ರಿಂದ 1853ತನಕ ಮಂಗಳೂರಿನಲ್ಲಿ 1855 ರಿಂದ 1860 ಕೊಡಗು, ಆಲ್ಮಂಡದಲ್ಲಿದ್ದು ಮಿಶನರಿಯಾಗಿದ್ದುದು ಮಾತ್ರವಲ್ಲದೆ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 10-5-1881ರಲ್ಲಿ ನಿಧನರಾದ ಇವರು ಕರ್ನಾಟದಲ್ಲಿ ವಾಸ ಮಾಡಿದ್ದು 24 ವರ್ಷ. ಈ ಅವಧಿಯಲ್ಲಿ ಅವರು ಮಾಡಿದ ಕನ್ನಡ ಸೇವೆ ಅಪಾರ. ಅವರ ಸಂಪಾಕತ್ವದ ಬರವಣಿಗೆಯಲ್ಲಿ ಮಂಗಳೂರು ಸಮಾಚಾರ(1843), ಕನ್ನಡ ಸಮಾಚಾರ(1844), ಈರಾರು ಪತ್ರಿಕೆ (1857) , ಚನ್ನಬಸವ ಪುರಾಣ (1851), ಜೈಮಿನಿ ಭಾರತ (1848), ದಾಸರ ಪದಗಳು(1850) , ಬಸವ ಪುರಾಣ (1850), ಕನಕದಾಸರ ಭಕ್ತಿಸಾರ(1850), ರಾವಣ ದಿಗ್ವಿಜಯ (1848), ಕನ್ನಡ ಗಾದೆಗಳು(1847) ದೇಶಾಂತ್ರಿಯ ಪ್ರಯಾಣ (1849) ರಾಜೇಂದ್ರನಾಮೆ (1857) ಹೃದಯ ದರ್ಪಣ(1850) ಮುಂತಾದ ಕೃತಿಗಳು ಇಂದಿಗೂ ಚರಿತ್ರೆ ಹೇಳುತ್ತದೆ. ಮೋಗ್ಲಿಂಗ್ ರವರ ಸಾಹಿತ್ಯಗಳಿಂದ ಭಾಷೆ, ಬರಹ, ಮುದ್ರಣ, ದಾಖಲೀಕರಣ ಮುಂತಾದ ಹಲವಾರು ಸಂಶೋಧನೆಗಳು ನಡೆಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries