ಉಪ್ಪಳ: ಮಂಗಲ್ಪಾಡಿ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶೋತ್ಸವು ಸಡಗರದಿಂದ ಜರಗಿತು. ನೂತನವಾಗಿ ದಾಖಲಾದ ಮಕ್ಕಳನ್ನು ಅತಿಥಿಗಳೊಂದಿಗೆ ಶಾಲಾ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ತಿಂಡಿ, ಬಲೂನ್, ಹೂಗಳನ್ನು ನೀಡಿ ಅಕ್ಷರ ಲೋಕಕ್ಕೆ ಸ್ವಾಗತಿಸಲಾಯಿತು. ಅಧ್ಯಾಪಕರೂ ಮಕ್ಕಳೂ ಸೇರಿ ಪ್ರವೇಶೋತ್ಸವ ಗೀತೆ ಹಾಡಿದರು. ಶಾಲಾ ರಕ್ಷಕ ಸಂಘದ ಅಧ್ಯಕ್ಷೆ ನೆಬೀಸ ನವಾಗತ ಮಕ್ಕಳಿಗೆ ಉಚಿತ ಕಲಿಕಾ ಕಿಟ್ ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲ ತರಗತಿಯ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರವನ್ನು, ಪಾಠ ಪುಸ್ತಕಗಳನ್ನು ವಿತರಿಸಲಾಯಿತು. ಮಾತೃ ಸಮಿತಿಯ ಸದಸ್ಯೆಯರು, ನೆರೆಯ ಶಾಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಶಿಕ್ಷಕ ಜೋಕಿ, ಚಂದ್ರಕಾಂತ, ಸಿನಿ, ಮರಿಯಮ್ಮ, ರೇಖಾ ಮುಂತಾದವರು ಹಾಜರಿದ್ದರು. ಶಾಲಾ ಹಿರಿಯ ಶಿಕ್ಷಕಿ ಆಶಾಲತಾ ಐಲ್ ಸ್ವಾಗತಿಸಿ, ಶಿಕ್ಷಕ ಪ್ರವೀಣ್ ಕುಮಾರ್ ವಂದಿಸಿದರು.
ಮಂಗಲ್ಪಾಡಿ: ಸಡಗರದ ಶಾಲಾ ಪ್ರವೇಶೋತ್ಸವ
0
ಜೂನ್ 07, 2019