ಬದಿಯಡ್ಕ: ಸ್ವಾರ್ಥ ಮನೋಭಾವವನ್ನು ಬದಿಗೊತ್ತಿ ಸಮಾಜದ ಉದ್ಧಾರಕ್ಕಾಗಿ ದುಡಿದ ಅನೇಕ ಧೀಮಂತ ನಾಯಕರ ದೇಶ ನಮ್ಮದಾಗಿದೆ. ನಮ್ಮ ಸಂಪಾದನೆಯ ಒಂದಂಶವನ್ನು ಸಮಾಜಸೇವೆಗೆ ಉಪಯೋಗಿಸಿದಾಗ ನಾವು ಸಾರ್ಥಕತೆಯನ್ನು ಪಡೆಯಬಹುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಉದಯಗಿರಿ ಬಾಂಜತ್ತಡ್ಕ ಶ್ರೀ ಶಂಕರನಾರಾಯಣ ಅನುದಾನಿತ ಕಿರಿಯ ಬುನಾದಿ ಶಾಲೆಯಲ್ಲಿ ಕ್ಯಾಂಪ್ಕೋ ವತಿಯಿಂದ ಕಳೆದ ವರ್ಷ ಪ್ರಾರಂಭಗೊಂಡ `ಕ್ಯಾಂಪ್ಕೋ ಇನ್ ಸೇವಾ'ದ 6ನೇ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ಪುಸ್ತಕೇತರ ಪಠನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ ವಾಶೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಯಾಂಪೆÇ್ಕೀ ಉಪಾಧ್ಯಕ್ಷ ಶಂ. ನಾ. ಖಂಡಿಗೆ, ಕ್ಯಾಂಪೆÇ್ಕ ಇನ್ ಸೇವಾ ಸಂಯೋಜಕ ಗಣೇಶ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕುಸುಮ, ಮಾತೃಸಂಘದ ಅಧ್ಯಕ್ಷೆ ಬೇಬಿ ಶಾಲಿನಿ, ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿ ಸ್ವಾಗತಿಸಿ, ಅಧ್ಯಾಪಕ ರಾಜೇಶ್ ಉಬ್ರಂಗಳ ವಂದಿಸಿದರು.