ಬದಿಯಡ್ಕ: ಮೈಸೂರು ಜಿಲ್ಲೆ ಕೆ.ಆರ್ ನಗರದ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದವರು ಏರ್ಪಡಿಸಿದ್ದ ಪ್ರೇಮಕವಿ ಕೆ.ಎಸ್ ನ ನೆನಪಿನ ರಾಷ್ಟ್ರ ಮಟ್ಟದ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೈಸೂರಿನ ರೋಟರಿ ಸಭಾಂಗಣದಲ್ಲಿ ಭಾನುವಾರ ಜರಗಿದ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಗಣ್ಯ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾದ ಕೆ.ನರಸಿಂಹ ಭಟ್ ಏತಡ್ಕ ಮತ್ತು ಸುಗಂಧಿ ಮರದಮೂಲೆ ಕಾಸರಗೋಡು ಉಪಸ್ಥಿತರಿದ್ದು ಪುರಸ್ಕಾರ ಸ್ವೀಕರಿಸಿದರು. ತುಂಬಿದ ಸಭಾಂಗಣದಲ್ಲಿ ನೆರೆದಿದ್ದ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.