ಕಾಸರಗೋಡು: ಸಮಾಜ ಸುಧಾರಣೆ ಮತ್ತು ದೀನದಲಿತರ ಸಮಗ್ರ ಅಭಿವೃದ್ಧಿಗೆ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರು ನೀಡಿದ ಕೊಡುಗೆ ಅಪಾರವಾದುದು. ಹೆಣ್ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರು ಶಾಲೆಯನ್ನು ತೆರೆದು ಶಿಕ್ಷಣ ನೀಡಲು ಮುಂದಾಗಿರುವುದು ಅಂದಿನ ಕಾಲದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿತ್ತು. ಸಮಾಜದ ಸುಧಾರಣೆಗಾಗಿ ಸಂಘಟನೆ ಅಗತ್ಯವೆಂದು ಮನಗಂಡು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂದು ಧಾರ್ಮಿಕ ಚಿಂತಕ, ಮುಂದಾಳು ಗಣಪತಿ ಕೋಟೆಕಣಿ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಭವನದಲ್ಲಿ ಆಯೋಜಿಸಿದ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಅವರ 68 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದಲ್ಲಿ ಹುಟ್ಟಿ ವೈದ್ಯಕೀಯ ಪದವಿಯನ್ನು ಪಡೆದು ಸ್ವಾತಂತ್ರ್ಯ ಹೋರಾಟ, ಸಾಹಿತ್ಯ, ಪತ್ರಿಕೋದ್ಯಮ, ದೀನದಲಿತರ ಸೇವೆ ಮೊದಲಾದ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನೊತ್ತಿ, ಸನ್ಯಾಸವನ್ನು ಸ್ವೀಕರಿಸಿದ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪ್ರತಿಮವಾದುದು. ಸಮಾಜ ಸೇವೆಯಲ್ಲಿ ಮೇರು ಸಾಧಕರಾದ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಮೂಲಕ ಅವರು ಸಾರಿದ ಸಂದೇಶವನ್ನು ಯುವ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು
ಕಾರ್ಯಕ್ರಮದಲ್ಲಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಸ್ಥಾಪಕ ವಾಮನ ರಾವ್ ಬೇಕಲ್ ಅವರು ಸ್ವಾಮೀಜಿ ಅವರ ಸಾಧನೆ, ದೀನ ದಲಿತರ ಬಗೆಗಿನ ಕಾಳಜಿ, ಸಮಾಜೋದ್ಧಾರ, ಸ್ವೋದ್ಯೋಗ, ಶಿಕ್ಷಣ, ಪತ್ರಿಕೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಸಂದೇಶಗಳ ಬಗ್ಗೆ ವಿವರಿಸಿದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಅಣಂಗೂರು ಅವರು ಮಾತನಾಡಿ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರು ನೀಡಿದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದರು.
ಸಂಘಟಕ ಜಗದೀಶ್ ಕೂಡ್ಲು ಅವರು ಮಾತನಾಡಿ ಕನ್ನಡ ಭಾಷೆ, ಸಂಸ್ಕøತಿಯನ್ನು ನಾಶಗೊಳಿಸಲು ನಿರಂತರ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಲು ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನಡೆಸುತ್ತಿರುವ ಕೈಂಕರ್ಯ ಶ್ಲಾಘನೀಯ. ಕನ್ನಡತನವನ್ನು, ಅಂತಹ ವಾತಾವರಣವನ್ನು ನಶಿಸಲು ಪ್ರಯತ್ನ ಸಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಈ ಸಂಸ್ಥೆಯು ನಿರಂತರವಾಗಿ ನಡೆಸುತ್ತಿರುವ ಕನ್ನಡ ಕಾರ್ಯಕ್ರಮ ಮಾದರಿಯಾಗಿದೆ ಎಂದರು. ಶ್ರೀ ಭಿಕ್ಷು ಲಕ್ಷ್ಮಣಾನಂದ ಅವರು ನೀಡಿದ ಕೊಡುಗೆ ಪ್ರತಿಯೊಬ್ಬರಿಗೂ ತಲುಪುವಂತಾಗಲು ಯುವ ಜನತೆ ದುಡಿಯಬೇಕೆಂದರು. ಕಾರ್ಯಕ್ರಮದಲ್ಲಿ ಸತೀಶ್ ಕೂಡ್ಲು, ದಿನೇಶ ಚಂದ್ರಗಿರಿ ಅಭ್ಯಾಗತರಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಮಟ್ಟದಲ್ಲಿ ಬಾಕ್ಸಿಂಗ್, ಕಬಡ್ಡಿ ಸಹಿತ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅಕ್ಷಯ ಕುಮಾರ್ ಎಚ್. ಮತ್ತು ಅವರ ಸಹೋದರಿ ರಾಜೇಶ್ವರಿ ಎಚ್. ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಹರಿ ಮಹಿಳಾ ಭಜನಾ ಸಂಘ ಕೂಡ್ಲು ಮತ್ತು ಸಪ್ತಗಿರಿ ಮಹಿಳಾ ಭಜನಾ ಸಂಘ ಪಾರೆಕಟ್ಟೆ ಅವರಿಂದ ದಾಸಸಂಕೀರ್ತನೆ ನಡೆಯಿತು. ಹರೀಶ್ಚಂದ್ರ ಸೂರ್ಲು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.
(ಚಿತ್ರ ಮಾಹಿತಿ : ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅಕ್ಷಯ ಕುಮಾರ್ ಎಚ್. ಮತ್ತು ಅವರ ಸಹೋದರಿ ರಾಜೇಶ್ವರಿ ಎಚ್. ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.)