ಬದಿಯಡ್ಕ: ಹಲಸಿನ ವಿವಿಧ ಉತ್ಪನ್ನಗಳು, ವಿವಿಧ ಜಾತಿಯ ತಳಿಗಳು ಹಾಗೂ ಇನ್ನೂ ಹತ್ತು ಹಲವಾರು ವೈವಿಧ್ಯಗಳೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇಂದು (ಜೂ.8) ಹಲಸು ಮೇಳ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸುವರು. ನಿವೃತ್ತ ಉಪ ನೋಂದಣಾಧಿಕಾರಿ ಮುಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಚಾರ ಸಂಕಿರಣದಲ್ಲಿ ಕಾಸರಗೋಡು ಸಿಪಿಸಿಆರ್‍ಐಯ ವಿಜ್ಞಾನಿ ಸರಿತ ಹೆಗ್ಡೆ, ವೆಂಕಟಕೃಷ್ಣ ಶರ್ಮ ಮುಳಿಯ, ಚಂದ್ರಶೇಖರ ಏತಡ್ಕ ಭಾಗವಹಿಸುವರು.
ಹಲಸು ಮೇಳದಲ್ಲಿ ಏನೇನಿರಲಿದೆ? : ಹಲಸಿನ ಕಾಯಿ ದೋಸೆ, ಹಣ್ಣಿನ ದೋಸೆ, ಹಣ್ಣಿನ ಕೊಟ್ಟಿಗೆ, ಗೆಣಸಲೆ, ಹಣ್ಣು ಹಾಗೂ ಕಾಯಿಯ ಗುಳಿ ಅಪ್ಪ, ಸೇಮಿಗೆ, ಹಲಸಿನ ಇಡ್ಲಿ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹಲ್ವ, ಬೀಜದ ಹಲ್ವ, ಉಂಡ್ಲಕಾಳು, ಚಿಪ್ಸ್, ಹಪ್ಪಳಗಳು, ಕಾಯಿಸೊಳೆ, ಹಣ್ಣಿನ ಸೊಳೆ, ಹಲಸಿನ ಹಣ್ಣಿನ ಡ್ರೈ ಸೊಳೆ, ಹಲಸಿನ ಹಣ್ಣಿನ ಕೇಕ್, ಹಲಸಿನ ಬೀಜದ ಬಿಸ್ಕತ್ತು, ವಡೆ, ಹಲಸಿನ ಸೊಳೆಯ ರೊಟ್ಟಿ, ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಜೆಲ್ಲಿ ಜಾಮ್, ಹಲಸಿನ ಕೇಕ್, ಹಲಸಿನ ಬೀಜದ ಪಾಯಸ, ಪೆರಟಿ ಪಾಯಸ, ಜೆರಡಿ ಪಾಯಸ, ಹಣ್ಣಿನ ಪಾಯಸ, ಕಾಯಿ ಚಿಪ್ಸ್, ಬೀಜದ ರಸಂ ಪುಡಿ, ಹಲಸಿನ ಐಸ್ ಕ್ರೀಂ, ಐಸ್ ಕ್ಯಾಂಡಿಗಳು, ಹಲಸಿನ ಗುಜ್ಜೆ ಮಂಚೂರಿ, ಗುಜ್ಜೆ ಕಬಾಬ್ ವಿವಿಧ ನಮೂನೆಯ ಸಮೂಸಗಳು, ಗುಜ್ಜೆ ಪಲಾವು ಅಲ್ಲದೆ ಇನ್ನೂ ಹಲವು ರೀತಿಯ ಹಲಸಿನ ವಿವಿಧ ರೀತಿಯ ತಿಂಡಿ ತಿನಸುಗಳು, ಉತ್ಪನ್ನಗಳು ಮೇಳದಲ್ಲಿ ಲಭ್ಯವಿದೆ. ವಿವಿಧ ಜಾತಿಯ ಹಲಸಿನ ಗಿಡಗಳು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಲಭ್ಯವಿದೆ.