ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ವತಿಯಿಂದ ಕುಂಬಳೆ ಕೃಷಿ ಭವನ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಶುಕ್ರವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯೋಗ ಗುರು ಶಾರ್ವರಿ ಭಟ್ ಅವರು ಯೋಗ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಸುಧಾಕರ ಕಾಮತ್, ರಮೇಶ್ ಭಟ್, ಹರೀಶ್ ಗಟ್ಟಿ, ಅರುಣ್ ಆಳ್ವ, ಪಂಚಾಯತಿ ಅಧಿಕಾರಿ ಶೈನ್ ಕುಮಾರ್ ಹಾಗು ಯೋಗ ಪಟು ಮನಮೋಹನ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ, ಅರೋಗ್ಯ ಅಧಿಕಾರಿ ಮಹೇಶ್ ವಂದಿಸಿದರು.