ಕಾಸರಗೋಡು: ಪ್ರಮುಖ ಸೋಷ್ಯಲಿಸ್ಟ್ ನೇತಾರರಾದ ಪಿ.ಕೋರನ್ ಮಾಸ್ತರ್ ಅವರ ಪ್ರಥಮ ಸಂಸ್ಮರಣೆ ಜನತಾದಳ(ಯುಡಿಎಫ್) ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಜರಗಿತು. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸ್ಮರಿಸಲಾಯಿತು.
ರಾಜ್ಯದ ಹಿರಿಯ ಸೋಷ್ಯಲಿಸ್ಟ್ ನೇತಾರರಾಗಿದ್ದ ಅವರ ವಿಯೋಗವು ಸಂಘಟನೆಗೆ ಅಪಾರ ನಷ್ಟವೆಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಅಧ್ಯಕ್ಷ ಎಂ.ಎಚ್.ಜನಾರ್ಧನ ಅವರು ಅಭಿಪ್ರಾಯಪಟ್ಟರು.
ಪಿ.ಕರುಣಾಕರನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಬಾಬು ಮಾಸ್ತರ್ ಚೆನ್ನಾರ್‍ಕಟ್ಟೆ ಸಂಸ್ಮರಣ ಭಾಷಣೆ ಮಾಡಿದರು. ಮೋಹನ್ ನಾಯಕ್, ರಾಮದಾಸ ಶ್ಯಾನುಭೋಗ್, ರಾಘವ, ಕಿರಣ್‍ರಾಜ್ ಮೊದಲಾದವರು ಮಾತನಾಡಿದರು. ಭಾಸ್ಕರ ಕೋಟೂರು ಸ್ವಾಗತಿಸಿ, ಸುಜಾತ ಬಂದಡ್ಕ ವಂದಿಸಿದರು.