ಮಂಜೇಶ್ವರ: ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ ಭಾನುವಾರ ಬೃಹತ್ ಇಫ್ತಾರ್ ಸಂಗಮ ನಡೆಯಿತು. ಹೊಸಂಗಡಿ ಹಿಲ್‍ಸೈಡ್ ಆಡಿಟೋರಿಯಂಆರ ನಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಅನೀಸ್ ಉಪ್ಪಳ ಅವರ ಅಧ್ಯಕ್ಷತೆಯಲ್ಲಿ ನಡೆದ ಇಫ್ತಾರ್ ಸಂಗಮವನ್ನು ಮಂಜೇಶ್ವರ ಸರ್ಕಲ್ ಇನ್ಸ್‍ಪೆಕ್ಟರ್ ದಿನೇಶ್ ಉದ್ಘಾಟಿಸಿದರು.
ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ, ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಬ್ಲಾಕ್ ಪಂ. ಸದಸ್ಯ ಕೆ.ಆರ್.ಜಯಾನಂದ, ಸಿ.ಪಿ.ಐ. ನೇತಾರ ಬಿ.ವಿ.ರಾಜನ್, ವಂದನೀಯ ಗುರು ಫಾದರ್ ಆಗಸ್ಟಿನ್, ಹರೀಶ್ಚಂದ್ರ ಮಂಜೇಶ್ವರ, ಸುಕುಮಾರ ಶೆಟ್ಟಿ, ಬಿ.ಎಂ.ಮುಸ್ತಫಾ, ಗೋಲ್ಡನ್ ರಹ್ಮಾನ್, ನವೀನ್ ರಾಜ್ ಮೊದಲಾದವರು ಮಾತನಾಡಿದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಸನಲ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಉದ್ಯಾವರ, ಆರಿಫ್ ಮಚ್ಚಂಪ್ಪಾಡಿ, ರತನ್ ಕುಮಾರ್ ಹೊಸಂಗಡಿ, ಅಲಿ ಉದ್ಯಾವರ, ಸಲಾಂ ವರ್ಕಾಡಿ ಮೊದಲಾದವರು ನೇತೃತ್ವ ನೀಡಿದರು.