ಮುಳ್ಳೇರಿಯ: ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಯು ಕೋಟೂರಿನ ಸ್ಕಂದ ನಿವಾಸದಲ್ಲಿ ಇತ್ತೀಚೆಗೆ ಪ್ರಾರಂಭವಾಯಿತು. ಸುಪ್ರಸಿದ್ದ ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾ ಹಾರೈಸಿದರು.
ಕಾರ್ಯದರ್ಶಿ ಮುರಳೀ ಸ್ಕಂದ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈಶ್ವರ ಭಟ್ ಬಳ್ಳಮೂಲೆ ಅಧ್ಯಕ್ಷತೆ ವಹಿಸಿದ್ದರು. ವಿಜಯಮುರಳಿ, ಹರಿಕೃಷ್ಣ ಪೆರಡಂಜಿ, ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಅಡ್ಕ ವಂದಿಸಿದರು. ಹಿಮ್ಮೇಳ ಗುರುಗಳಾಗಿ ಅಡ್ಕ ಕೃಷ್ಣ ಭಟ್ ತರಗತಿಗಳನ್ನು ನಡೆಸುವರು.