ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಬುಧವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಧಾನ ಅಧ್ಯಾಪಕ ಸುಧಾಕರ.ವಿ ವಹಿಸಿದ್ದರು. ಅತಿಥಿಗಳಾಗಿ ಎಸ್.ವಿ.ವಿ.ಎಚ್.ಎಸ್ ಶಾಲೆಯ ಕನ್ನಡ ಶಿಕ್ಷಕಿ ಸಾವಿತ್ರಿ ಟೀಚರ್, ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್.ಆರ್.ಎಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ತಿಮ್ಮಪ್ಪ ಭಟ್, ಶಾಲಾ ಮಾತೃಸಂಘದ ಅಧ್ಯಕ್ಷೆ ಸೌಮ್ಯ ಪ್ರಕಾಶ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಬಳಿಕ ಮೀಯಪದವಿನ ಎಂ.ಐ.ಎಂ ಸ್ಟೋರ್‍ನ ಮಾಲೀಕ ಚಂದ್ರಶೇಖರ. ಎಂ ಉಚಿತವಾಗಿ ನೀಡಿದ ವಾರ್ತಾ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಶಿಕ್ಷಕಿ ಯೋಗಿತ ಪಿ.ಆರ್ ಸ್ವಾಗತಿಸಿ, ಅಧ್ಯಾಪಕ ರಾಮಚಂದ್ರ ಕೆ.ಎಂ ವಂದಿಸಿದರು. ಶಿಕ್ಷಕಿ ರಜನಿ.ಸಿ.ಕೆ ನಿರೂಪಿಸಿದರು.