ಮಂಜೇಶ್ವರ: ಚಿನಾಲದ ನವಯುವಕ ಕಲಾವೃಂದ ಗ್ರಂಥಾಲಯದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ, ರಂಗಕಲಾವಿದ ಜ್ಞಾನಪೀಠ ಪುರಸ್ಕøತರಾದ ಗಿರೀಶ ಕಾರ್ನಾಡರ ನಿಧನಕ್ಕೆ ನುಡಿನಮನ ಕಾರ್ಯಕ್ರಮ ನಡೆಯಿತು.
ಗ್ರಂಥಾಲಯದ ಅಧ್ಯಕ್ಷ ಯೋಗೀಶ ಕೆ.ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಡಿ.ಕಮಲಾಕ್ಷ ಉದ್ಘಾಟಿಸಿದರು. ಪೊಸಡಿಗುಂಪೆ ಮಾಸಪತ್ರಿಕೆಯ ಸಂಪಾದಕ ಜೋನ್ ಡಿಸೋಜಾ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಮಾಜದ ಅಸಮಾನತೆ, ಮೂಢ ನಂಬಿಕೆಗಳ ವಿರುದ್ದ ಹೋರಾಡಿದ ವ್ಯಕ್ತಿಯ ಸಾವು ತುಂಬಲಾರದ ನಷ್ಟ ಎಂದು ತಿಳಿಸಿದರು.
ಮೋನಪ್ಪ ಪೂಜಾರಿ, ಜನಾರ್ದನ ಶಾಂತಿನಗರ, ಅನ್ಸಾರಿ, ಲೋಕೇಶ್ ಸಿ. ಉಪಸ್ಥಿತರಿದ್ದು ಮಾತನಾಡಿದರು. ಗ್ರಂಥಾಲಯದ ಉಪಾಧ್ಯಕ್ಷ ಲವಾನಂದ ಎಲಿಯಾಣ ಸ್ವಾಗತಿಸಿ, ಗೋಪಾಲಕೃಷ್ಣ ವಂದಿಸಿದರು. ಉದಯ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು.