ಮಂಜೇಶ್ವರ: ದೇಶಿಯ ಅಧ್ಯಾಪಕ ಪರಿಷತ್ತು ಒಳಗೊಂಡ ಎಫ್‍ಇಟಿಓ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜುಲೈ 1ರಂದು ಸೋಮವಾರ ಬೆಳಿಗ್ಗೆ 10.ರಿಂದ ಕಾಸರಗೋಡು ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಧರಣಿ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ದೇಶಿಯ ಅಧ್ಯಾಪಕ ಪರಿಷತ್ತು ಕರೆ ನೀಡಿದೆ.
ಸಹಭಾಗಿತ್ವ ಪಿಂಚಣಿ ಯೋಜನೆಯನ್ನು ಕೂಡಲೇ ಹಿಂತೆಗೆಯಬೇಕು, 11 ನೇ ವೇತನ ಪರಿಷ್ಕರಣೆ ಪ್ರಕ್ರಿಯೆ ಕೂಡಲೇ ಜಾರಿಗೊಳಿಸಬೇಕು, ಮೆಡಿಸೆಪ್ ಯೋಜನೆಯನ್ನು ಕ್ರಮಬದ್ಧಗೊಳಿಸಬೇಕು, ಸರಕಾರಿ ಕಚೇರಿಗಳಲ್ಲಿ 5 ದಿನಗಳ ಕರ್ತವ್ಯ ದಿನ ಜಾರಿಗೊಳಿಸಬೇಕು, ಏಕೀಕೃತ ಪಂಚಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜರಗಲಿರುವ ಈ ಧರಣಿ ಮುಷ್ಕರದಲ್ಲಿ ಎಲ್ಲಾ ಅಧ್ಯಾಪಕ ಬಂಧುಗಳು ಪಾಲ್ಗೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.