ಪೆರ್ಲ:ಹಿರಿಯ ಯಕ್ಷಗಾನ ಕಲಾವಿದ, ಪ್ರಸಾಧನ ನಿಪುಣ ದೇವಕಾನ ಕೃಷ್ಣ ಭಟ್ ಅವರ ನಿಧನಕ್ಕೆ ಸಂತಾಪ ಸೂಚಕ ಸಭೆ ಭಾನುವಾರ ಪೆರ್ಲ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ನಡೆಯಿತು.
ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ.ದೇವಕಾನ ಅವರು ನೇರ ನಡೆ ನುಡಿಯ ಅಪ್ರತಿಮ ವ್ಯಕ್ತಿತ್ವ ಹೊಂದಿದ್ದರು ಎಂದರು. ತಮ್ಮ ಆಳ ಅಧ್ಯಯನ ಮತ್ತು ನಿಪುಣತೆಯಿಂದ ಯಕ್ಷಗಾನ ಕಲಾಕ್ಷೇತ್ರಕ್ಕೆ ವಿಶ್ವವವಿದ್ಯಾನಿಲಯದಂತಿದ್ದ ಅವರ ಕೊಡುಗೆ ಮಹತ್ತರವಾದುದು. ಅವರ ಅಗಲುವಿಕೆ ಕಲಾಕ್ಷೇತ್ರದ ಭರಿಸಲಾರದ ನಷ್ಟ ಎಂದು ತಿಳಿಸಿದರು.
ಕೇಂದ್ರದ ನಿರ್ದೇಶಕ ಸಬ್ಬಣಕೋಡಿ ರಾಮ ಭಟ್, ಕೃಷ್ಣ ಭಟ್ ಅವರ ವೇಷಭೂಷಣ, ಬಣ್ಣಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರೂ ಯಕ್ಷಗಾನ ಕ್ಷೇತ್ರದಲ್ಲಿ ಪ್ರಬುದ್ಧತೆ ಮೆರೆದಿದ್ದರು.ಅವರ ತಾಮ್ರಧ್ವಜ, ಕಂಸ, ಭಸ್ಮಾಸುರ, ಇಂದ್ರಜಿತು ಮೊದಲಾದ ವೇಷಗಳು ಅತ್ಯದ್ಭುತ ನೆನಪಿಸಿ ನುಡಿನಮನ ಸಲ್ಲಿಸಿದರು.
ಹರಿಪ್ರಸಾದ್ ಮಾಯಿಲೆಂಗಿ, ಶರತ್ಚಂದ್ರ ಶೆಟ್ಟಿ ಶೇಣಿ, ವಿಷ್ಣು ಭಟ್ ಖಂಡೇರಿ, ಜ್ಯೋತ್ಸ್ನಾ ಕಡಂದೇಲು, ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.ಶಿಕ್ಷಕ ಹರೀಶ್ ವಂದಿಸಿದರು.