ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಂಞÂಣ್ಣ ರೈ ಗ್ರಂಥಾಲಯ-ವಾಚನಾಲಯದಲ್ಲಿ ಬಾಲವೇದಿ ಆಯೋಜಿಸಿರುವ ವಾಚನ ವಾರಾಚರಣೆಯ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾರ್ಥಿಗಳಿಗೆ ಶನಿವಾರ ಕ್ವಿಜ್ ಸ್ಪರ್ಧೆ ಆಯೋಜಿಸಲಾಗಿತ್ತು.
ಕ್ವಜ್ ಸ್ಪರ್ಧೆಯ ಸಮಾರೋಪದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ರೈ ಬಹುಮಾನಗಳನ್ನು ವಿತರಿಸಿದರು. ಅನಿಲ್ ಕುಮಾರ್ ಕರ್ಮಂತೋಡಿ ಅವರು ಕ್ವಜ್ ಸ್ಪರ್ಧೆಯನ್ನು ನಿರ್ವಹಿಸಿದರು. ಕೆ.ಕೆ.ಮೋಹನನ್, ಚಂದ್ರನ್, ನಾರಾಯಣ ಮಾಸ್ತರ್. ನವೋದಯ ಲಕ್ಷ್ಮೀ ಕೆ ಉಪಸ್ಥಿತರಿದ್ದು ಶುಭಹಾರೈಸಿದರು. ಹೈಸ್ಕೂಲು ವಿಭಾಗದಲ್ಲಿ ದೇವಿಕಾ ಮೋಹನ್ ಪ್ರಥಮ, ದೀಪಕ್ ಮೋಹನ್ ದ್ವಿತೀಯ, ಸಾಂದ್ರಾ ಸಂತೋಷ್ ತೃತೀಯ ಬಹುಮಾನಗಳನ್ನು ಪಡೆದರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಅಭಿಮನ್ಯು, ದ್ವಿತೀಯ ದೇವಿಕಾ ವಿ.ಕೆ., ತೃತೀಯ ಅನುನಂದ ಬಹುಮಾನಗಳನ್ನು ಪಡೆದುಕೊಂಡರು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳೂ ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ನಡೆಸುವವರಾಗಿದ್ದಾರೆ.