ನವದೆಹಲಿ: ಪಾಕ್ ವಿರುದ್ಧ ಭಾರತ ನಡೆಸಿದ್ದ 2016 ರ ಸರ್ಜಿಕಲ್ ಸ್ಟ್ರೈಕ್ ಹಾಗೂ ಈ ವರ್ಷದ ಬಾಲಕೋಟ್ ಸ್ಟ್ರೈಕ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಪಿಎಸ್ ಅಧಿಕಾರಿ ಸಮಂತ್ ಗೋಯೆಲ್ ಅವರನ್ನು ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ನ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಿ ಅದೇಶ ಹೊರಡಿಸಲಾಗಿದೆ.
ಸಮಂತ್ ಗೋಯೆಲ್ ಪಂಜಾಬ್ ಕೇಡರ್ನ 1984 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.ಇವರು ಪ್ರಸ್ತುತ ರಾ ನ ಕಾರ್ಯಾಚರಣಾ ಮುಖ್ಯಸ್ಥರಾಗಿದ್ದಾರೆ. 1984 ರ ಬ್ಯಾಚ್‍ನ ಅಸ್ಸಾಂ-ಮೇಘಾಲಯ ಕೇಡರ್‍ನ ಐಪಿಎಸ್ ಅಧಿಕಾರಿ.ಅರವಿಂದ್ ಕುಮಾರ್ ಅವರನ್ನು ಗುಪ್ತಚರ ಬ್ಯೂರೋದ (ಐಬಿ) ಹೊಸ ನಿರ್ದೇಶಕರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.
ಪ್ರಸ್ತುತ ರಾ ಮುಖ್ಯಸ್ಥ ಅನಿಲ್ ಧಾಸ್ಮಾನಾ ಮತ್ತು ಈಗಿನ ಐಬಿ ಮುಖ್ಯಸ್ಥ ರಾಜೀವ್ ಜೈನ್ ಅವರ ಅಧಿಕಾರಾವಧಿ ತಿಂಗಳಾಂತ್ಯಕ್ಕೆ ಕೊನೆಯಾಗಲಿದೆ. ಆ ನಂತರ ಸಮಂತ್ ಹಾಗೂ ಅರವಿಂದ್ ಕ್ರಮವಾಗಿ ಆಯಾ ವಿಭಾಗಗಳ ಆಡಳಿತ ವಹಿಸಿಕೊಳ್ಲಲಿದ್ದಾರೆ. ಡಿಸೆಂಬರ್ 2016 ರಲ್ಲಿ ಧಾಸ್ಮಾನಾ ಹಾಗೂ ಜೈನ್ ಅವರನ್ನು ರಾ ಹಾಗೂ ಐಬಿ ಮುಖ್ಯರನ್ನಾಗಿ ಸರ್ಕಾರ ನೇಮಕ ಮಾಡಿತ್ತು ಕಳೆದ ಡಿಸೆಂಬರ್ 2018 ರಲ್ಲಿ ಅವರ ಅಧಿಕಾರಾವಧಿಯನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಲಾಗಿತ್ತು.
ಐಬಿ ಯಲ್ಲಿ ಎಡಪಂಥೀಯ ಉಗ್ರವಾದವನ್ನು ನಿಭಾಯಿಸುವಲ್ಲಿ ಕುಮಾರ್ ಅನುಭವಿಯಾಗಿದ್ದಾರೆ. ಜೊತೆಗೆ ಅವರು ಕಾಶ್ಮೀರ ವಿಷಯ ತ ಜ್ಞ ರೂ ಆಗಿರುವರು.