ಕಾಸರಗೋಡು: ಸಂಸ್ಕøತಿ ಇಲಾಖೆ ವ್ಯಾಪ್ತಿಯ ಪತ್ತನಂತಿಟ್ಟ ಆರನ್ಮುಳದಲ್ಲಿ ಚಟುವಟಿಕೆ ನಡೆಸುತ್ತಿರುವ ಪರಂಪರಾಗತ ವಾಸ್ತು ವಿದ್ಯೆ, ಭಿತ್ತಿಚಿತ್ರ ಸಂರಕ್ಷಣೆ ಕೇಂದ್ರವಾಗಿರುವ ವಾಸ್ತುವಿದ್ಯಾ ಗುರುಕುಲದ ಕಾಂಞಂಗಾಡ್ ಪ್ರಾದೇಶಿಕ ಕೇಂದ್ರದಲ್ಲಿ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಆರಂಭಿಸಲಾಗುವ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ನಾತಕೋತ್ತರ ಡಿಪೆÇ್ಲಮಾ ಇನ್ ಟ್ರೆಡೀಷನಲ್ ಆರ್ಕಿಟೆಕ್ಚರ್, ಸರ್ಟಿಫಿಕೆಟ್ ಕೊರ್ಸ್ ಇನ್ ಟ್ರೆಡಿಷನಲ್ ಆರ್ಕಿಟೆಕ್ಚರ್, ಪರಂಪರಾಗತ ವಾಸ್ತು ವಿಜ್ಞಾನ ಡಿಪೆÇ್ಲಮಾ ಕರೆಸ್ಪಾಂಡೆನ್ಸ್ ಕೋರ್ಸ್, ಮ್ಯೂರಲ್ ಪೈಂಟಿಂಗ್ ತರಬೇತಿ ಕಾರ್ಯಕ್ರಮ ಇತ್ಯಾದಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 15ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 0468-2319740, 9847053294, 9847053293, 9847053293.