ಉಪ್ಪಳ: ಪೈವಳಿಕೆನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳಿಗಾಗಿ ದಿನವೇತನ ಆಧಾರದಲ್ಲಿ ನೇಮಕಾತಿ ನಡೆಸಲು ಜೂ.3 ಸೋಮವಾರ ಪೂರ್ವಾಹ್ನ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಉದ್ಯೋಗಾರ್ಥಿಗಳು ಅಸಲಿ ದಾಖಲೆಪತ್ರಗಳೊಂದಿಗೆ ಹಾಜರಾಗಬಹುದು.
ಎಲ್.ಪಿ.ಎಸ್.ಎ ಮಲಯಾಳ-3, ಯು.ಪಿ.ಎಸ್.ಎ ಕನ್ನಡ-2, ಯು.ಪಿ.ಎಸ್.ಎ ಮಲಯಾಳ-2, ಜೂನಿಯರ್ ಲ್ಯಾಂಗ್ವೇಜ್ ಟೀಚರ್ ಹಿಂದಿ-1, ಜೂನಿಯರ್ ಲ್ಯಾಂಗ್ವೇಜ್ ಟೀಚರ್ ಅರೆಬಿಕ್-1, ಎಚ್.ಎಸ್.ಎ ಹಿಂದಿ-1, ಎಚ್.ಎಸ್.ಎ ಫಿಸಿಕಲ್ ಸಯನ್ಸ್ ಮಲಯಾಳ ಮಾಧ್ಯಮ-1, ಎಚ್.ಎಸ್.ಎ ಸೋಶಿಯಲ್ ಸಯನ್ಸ್ ಮಲಯಾಳ ಮಾಧ್ಯಮ-1, ಎಚ್.ಎಸ್.ಎ ಗಣಿತ ಮಲಯಾಳ ಮಾಧ್ಯಮ-1 ಹುದ್ದೆಗೆ ಸಂದರ್ಶನ ನಡೆಯಲಿದೆ.