ಕಾಸರಗೋಡು: ಜಿಲ್ಲೆಯ ನದಿಗಳಿಂದ ಮತ್ತು ಇತರ ಜಲಾಶಯಗಳಿಂದ ಅಕ್ರಮವಾಗಿ ಮರಳು ಹೂಳೆತ್ತುವಿಕೆ ಕಡ್ಡಾಯವಾಗಿ ನಿಯಂತ್ರಿಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಯಲ್ಲಿ ಈ ವಿಚಾರ ತಿಳಿಸಲಾಯಿತು.
ಮಂಜೇಶ್ವರ ಹಾರ್ಬರ್ ನಲ್ಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ರಾತ್ರಿಕಾಲಗಳಲ್ಲಿ ಮರಳು ಹೂಳೆತ್ತುವಿಕೆ ವ್ಯಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಚೆರುವತ್ತೂರು ಮಡಕ್ಕರದಲ್ಲಿನಿರ್ಮಿಸಲಾಗುತ್ತಿರುವ ಕೃತಕ ದ್ವೀಪದ ಬಳಿಯೂ ಅಕ್ರಮಮರಳು ಹೂಳೆತ್ತುವಿಕೆ ಅಧಿಕವಾಗಿದೆ. ವಲಿಯಪರಂಬ ಗ್ರಾಮಪಂಚಾಯತ್ ನ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿ ಅಕ್ರಮಮರಳು ದಂಧೆ ನಡೆಯುತ್ತಿದೆ ಎಂದು ಸಭೆ ಖಂಡನೆ ವ್ಯಕ್ತಪಡಿಸಿದೆ. ಇದು ಭಾರೀ ಪ್ರಕೃತಿ ದುರಂತಕ್ಕೆ ಕಾರಣವಾಗಲಿದೆ ಎಂದು ಸಭೆ ಕಳಕಳಿ ವ್ಯಕ್ತಪಡಿಸಿದೆ.
ರಸ್ತೆ ಮೂಲಕದ ಅಕ್ರಮಮರಳು ಸಾಗಾಟ ನಡೆಯುವುದನ್ನು ತಡೆಯಲು ಕ್ರಮ ಬಿಗಿಗೊಳಿಸುವಂತೆ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಸಭೆ ಆದೇಶ ನೀಡಿದೆ. ಜಿಲ್ಲಾಧಿಕಾರಿ ನೇರವಾಗಿ ಪರಿಶೀಲಿಸಿ ಮರಳು ದಂಧೆ ತಡೆಯಲಾಗುವುದು. ಇತರ ವ್ಯವಸ್ಥೆ ಸುಗಮವಾದರೆ ಪೂರ್ಣ ರೂಪದಲ್ಲಿ ಅಕ್ರಮ ಮರಳು ವ್ಯವಹಾರ ತಡೆಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್, ಕೆ.ಕುಂ??ರಾಮನ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ಕಾಂ?ಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ನೀಲೇಶ್ವರ ನಗರಸಭೆ ಉಪಾಧ್ಯಕ್ಷೆ ವಿ.ಗೌರಿ, ಗ್ರಾಮಪಚಾಯತ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಎ.ಎ.ಜಲೀಲ್, ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಲೀಡ್ ಬ್ಯಾಂಕ್ ಮೆನೆಜರ್ ಕಣ್ಣನ್, ಸಂಸದರ ಪ್ರತಿನಿಧಿ ನ್ಯಾವಾದಿ ಗೋವಿಂದನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.
2018-19 ರಾಜ್ಯ ವಾರ್ಷಿಕ ಯೋಜನೆಯಲ್ಲಿ ಶೇ 100 ಸಾಧನೆನಡೆಸಿದ 15 ಇಲಾಖೆಗಳ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಶಾಸಕರು ಅಭಿನಂದನೆ ನಡೆಸಿದರು. ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್ ವರದಿ ವಾಚಿಸಿದರು.