ಕಾಸರಗೋಡು: ಕಾಸರಗೋಡು ರೈಲ್ವೇ ಸ್ಟೇಷನ್ ಆವರಣದಲ್ಲಿ ಅಶಕ್ತ ಸ್ಥಿತಿಯಲ್ಲಿ ಕಂಡುಬಂದ ಭಿಕ್ಷುಕಿ ವಯೋವೃದ್ಧೆ ಸರೋಜಿನಿಗೆ ಪುನರ್ವಸತಿ ಒದಗಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೆಷನ್ ಅಧಿಕಾರಿ ದಿನೇಶ್ ಅವರ ಆದೇಶ ಪ್ರಕಾರ ಕಾಸರಗೋಡು ನಗರ ಪೊಲೀಸರ ಸಹಾಯದೊಂದಿಗೆ ಡಿ.ಎನ್.ಎಸ್.ಎ. ಕಾರ್ಯಕರ್ತರು ಪಾರಾಲೀಗಲ್ ಸ್ವಯಂಸೇವಕರು, ಕೇರಳದ ನೆಯ್ಯಾಟಿಂಕರ ಮೂಲನಿವಾಸಿ ಸರೋಜಿನಿ ಅವರನ್ನು ಹೊಸದುರ್ಗದ ಸ್ನೇಹಸದನಕ್ಕೆ ಸೇರ್ಪಡೆಗೊಳಿಸಿದ್ದಾರೆ.
ಜೂ.19ರಂದು ಸರೋಜಿನಿಯನ್ನು ರೈಲ್ವೇ ಸ್ಟೇಷನ್ ನಲ್ಲಿ ಅಶಕ್ತಸ್ಥಿತಿಯಲ್ಲಿ ಪತ್ತೆಮಾಡಿದ ಸ್ವಯಂಸೇವಕಿ ಕೃಷ್ಣವೇಣಿ ಅವರು, ಪೊಲೀಸರ ಸಹಾಯದೊಂದಿಗೆ ವೈದ್ಯಕೀಯ ತಪಾಸನೆಗಾಗಿ ತಾಲುಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ 5 ದಿನಗಳಚಿಕಿತ್ಸೆ ಪಡೆದ ನಂತರ ಡಿ.ಎಲ್.ಎಸ್.ಎ. ಸಿಬ್ಬಂದಿಯನೇತೃತ್ವದಲ್ಲಿ ಅವರಿಗೆ ಆಹಾರ ಮತ್ತು ಬಟ್ಟೆಬರೆಯ ವ್ಯವಸ್ಥೆ ಒದಗಿಸಲಾಗಿತ್ತು. ಡಿ.ಎಲ್.ಎಸ್.ಎ. ಪ್ರಭಾರ ಕಾರ್ಯದರ್ಶಿ, ಸಹಾಯಕ ನ್ಯಾಯಮೂರ್ತಿ ಆರ್.ಸುಧಾಕಾಂತ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಅವರ ಆದೇಶ ಪ್ರಕಾರ ಸರೋಜಿನಿ ಅವರನ್ನು ಹೊಸದುರ್ಗ ಸ್ನೇಹಸದನಕ್ಕೆ ಸೇರ್ಪಡೆಗೊಳಿಸಲಾಗಿತ್ತು.