ಮುಳ್ಳೇರಿಯ: ಕಿನ್ನಿಂಗಾರು ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಧೂಮಾವತಿ ಕ್ರೀಡಾ ಬಳಗ ಆಶ್ರಯದಲ್ಲಿ 1ನೇ ತರಗತಿಯಿಂದ 10ನೇ ತರಗತಿ ವರೆಗಿನ 75 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಶ್ರೀ ವಿಷ್ಣುಮೂರ್ತಿ ಧೂಮಾವತಿ ಭಜನಾ ಮಂದಿರದಲ್ಲಿ ನಡೆದ ಸಮಾರಂಭವನ್ನು ಬೆಳ್ಳೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್ ಉದ್ಘಾಟಿಸಿದರು. ಕ್ರೀಡಾ ಬಳಗ ಅಧ್ಯಕ್ಷ ರಾಘವ ಬೆಳೇರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಮಹಾಲಿಂಗೇಶ್ವರ ಭಟ್ ಅತಿಥಿಗಳಾಗಿ ಭಾಗವಹಿಸಿದರು.
ಕುಂಞÂರಾಮ ಮಾಸ್ತರ್ ಬೆಳೇರಿ ಸ್ವಾಗತಿಸಿ, ಬಿ.ಎ.ಬೆಳೇರಿ ವಂದಿಸಿದರು.