HEALTH TIPS

ಸಂಸ್ಕøತಿ ಇಲಾಖೆಯಿಂದ ಯಕ್ಷಗಾನಕ್ಕೆ ಮನ್ನಣೆ=ಕಲಾವಿದರಿಗೆ ಮಾಸಾಶನ=ಸವಾಕ್ ಹೋರಾಟದ ಫಲ=ಎಂ.ಉಮೇಶ್ ಸಾಲ್ಯಾನ್


           ಕಾಸರಗೋಡು: ಸಂಘಟಿತ ಪ್ರಯತ್ನಗಳಿಗೆ ಎಂದಿಗೂ ನಿಶ್ಚಿತ ಫಲ ದೊರಕಲು ಸಾಧ್ಯವಾಗುವುದು.ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಓಫ್ ಕೇರಳ(ಸವಾಕ್)ಸಂಘಟನೆಯ ಅವಿರತ  ಶ್ರಮದಿಂದ ಯಕ್ಷಗಾನ ಕಲೆಯನ್ನು ರಾಜ್ಯ ಸಂಸ್ಕøತಿ ಇಲಾಖೆ ಅಂಗೀಕರಿಸುವುದರೊಂದಿಗೆ ಅಶಕ್ತ ಕಲಾವಿದರಿಗೆ ಮಸಾಶನ ದೊರೆಯಲು ಪ್ರಾರಂಭಿಸಿದೆ. ಗಡಿನಾಡಿಗೆ ಸಂಬಂಧಿಸಿ ಇದೊಂದು ದಾಖಲೆಯಾಗಿದೆ ಎಂದು ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅವರು ತಿಳಿಸಿದರು.
        ಕಾಸರಗೋಡಿನ ರಂಗ ಕುಟೀರದಲ್ಲಿ ಶನಿವಾರ ನಡೆದ ಸವಾಕ್ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಯಕ್ಷಗಾನ ಕಲಾವಿದರಿಗೆ ಪ್ರಪ್ರಥಮ ಬಾರಿಗೆ ಕೇರಳದಲ್ಲಿ ಮಾಸಾಶನ ಲಭಿಸಲು ಸಂಸ್ಕøತಿ ಇಲಾಖೆ ನೀಡಿದ ಅಂಗೀಕಾರವನ್ನು ಉಲ್ಲೇಖಿಸಿ ಮಾಹಿತಿ ನೀಡಿ ಮಾತನಾಡಿದರು.
         ಹಿರಿಯ ಯಕ್ಷಗಾನ ಕಲಾವಿದರಾದ ಅಪ್ಪಕುಂಞÂ ಮಣಿಯಾಣಿ ಅವರಿಗೆ ಮೊತ್ತಮೊದಲ ಬಾರಿಗೆ ಇದೀಗ ಮಾಸಾಶನ ಲಭ್ಯವಾಗುವಲ್ಲಿ ಸಫಲವಾಗಿದ್ದು, ಮುಂದಿನ ದಿನಗಳಲ್ಲಿ ಅಶಕ್ತ ಇತರ ಯಕ್ಷಗಾನ ಕಲಾವಿದರಿಗೂ ಇದು ಲಭ್ಯವಾಗುವುದು ಎಂದು ಅವರು ತಿಳಿಸಿದರು. ವಿವಿಧ ಕ್ಷೇತ್ರಗಳ ಕಲಾವಿದರ ಸಮಗ್ರ ಒಳಿತಿಗಾಗಿ ಸವಾಕ್ ನಡೆಸುತ್ತಿರುವ ಸಂಘಟಿತ ಯತ್ನಗಳು ಈವರೆಗೆ ಯಶಸ್ವಿಯಾಗಿ ಮುನ್ನಡೆದಿದ್ದು ಪರಸ್ಪರ ಅರ್ಥೈಸಿಕೊಂಡು ಮುನ್ನಡೆಯುವ ಸನ್ಮನಸ್ಸು ಪ್ರತಿಯೊಬ್ಬರಲ್ಲೂ ನಿಶ್ಚಿಪ್ತವಾಗಿರಲಿ ಎಂದು ಅವರು ಕರೆನೀಡಿದರು.
        ವೇದಿಕೆಯಲ್ಲಿ ಉಪಸ್ಥಿತರಿದ್ದ ಸವಾಕ್ ಜಿಲ್ಲಾ ಉಪಾಧ್ಯಕ್ಷ, ಯಕ್ಷಗಾನ ನಾಟ್ಯಗುರು ದಿವಾಣ ಶಿವಶಂಕರ ಭಟ್ ಅವರು ಮಾತನಾಡಿ, ಯಕ್ಷಗಾನ ಕಲಾವಿದರಿಗೆ ಕಲಾವಿದನೆಂಬ ಅಂಗೀಕಾರವನ್ನು ಕೇರಳ ಸಂಸ್ಕøತಿ ಇಲಾಖೆಯು ಮನ್ನಿಸಿರುವುದು ಗಡಿನಾಡಿಗೆ ಹೆಮ್ಮೆಯ ವಿಚಾರವಾಗಿದೆ. ಯಕ್ಷಗಾನ ಕಲಾವಿದರೊಬ್ಬರಿಗೆ ಇದೀಗ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಮಾಸಾಶನ ಅಂಗೀಕಾರವಾಗಿರುವುದು ಜಿಲ್ಲೆಯ ಮಟ್ಟಿಗೆ ಮಹತ್ತರದ ತಿರುವಾಗಿದ್ದು, ಸವಾಕ್ ಸಂಘಟನೆ ಮತ್ತದರ ಕಲಾವಿದ ಸದಸ್ಯರುಗಳ ನಿರಂತರ ಹೋರಾಟದ ಫಲವಾಗಿ ಈ ಯಶಸ್ಸು ಲಭಿಸಿದೆ ಎಂದು ತಿಳಿಸಿದರು.
        ಸವಾಕ್ ಜಿಲ್ಲಾ ಪ್ರತಿನಿಧಿಗಳಾದ ಭಾರತೀ ಬಾಬು, ಮಧುಸೂದನ ಬಲ್ಲಾಳ್ ಬೆಳ್ಳೂರು, ಸುರೇಶ್ ಪಣಿಕ್ಕರ್, ಜಯಶ್ರೀ ಕಾರಡ್ಕ, ಜಯಂತಿ ಸುವರ್ಣ, ಸುಶ್ಮಿತಾ ಕೆ.ಆರ್., ದಿವಾಕರ ಎ., ದಯಾ ಪಿಲಿಕುಂಜೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
        ಇತ್ತೀಚೆಗೆ ನಿಧನರಾದ ಹಿರಿಯ ನಾಟಕ ಕರ್ತೃ, ಕಲಾವಿದ, ಸಾಹಿತಿ ಗಿರೀಶ್ ಕಾರ್ನಾಡ್, ಹಿರಿಯ ಯಕ್ಷಗಾನ ಕಲಾವಿದ, ಪ್ರಸಾದನ ಮಾಂತ್ರಿಕ ದೇವಕಾನ ಕೃಷ್ಣ ಭಟ್, ಯಕ್ಷಗಾನ ಕಲಾವಿದ ಕುಡಾಣ ಗೋಪಾಲಕೃಷ್ಣ ಭಟ್, ನಾಟಕ=ಯಕ್ಷಗಾನ ಕಲಾವಿದ ಯತೀಶ್ ಕುಮಾರ್ ರೈ ಅವರ ತಾಯಿ ಭವಾನಿ ರೈ ಅವರ ನಿಧನಕ್ಕೆ ಸಭೆಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಸ್ವಾಗತಿಸಿ, ಮಂಜೇಶ್ವರ ವಲಯ ಕಾರ್ಯದರ್ಶಿ ಚಂದ್ರಹಾಸ ಕಯ್ಯಾರು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries