ಕಾಸರಗೋಡು: ವಾಚನ ಸಪ್ತಾಹದ ಸಮಾರೋಪ ದಿನಾಚರಣೆ ರಾವಣೀಶ್ವರಂ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಸಮಾರಂಭ ಅಂಗವಾಗಿ ಮಕ್ಕಳ ಉದ್ಯಾನ(ಚಿಲ್ಡ್ರನ್ ಪಾರ್ಕ್) ಲೋಕಾರ್ಪಣೆಯೂ, ವಾಚನಾ ಬೋಧಿ ವೃಕ್ಷ ನಿರ್ಮಾಣ ನಡೆಯಿತು. ರಾಜ್ಯ ಸರಕಾರದ ಸಂಪೂರ್ಣ ಶಿಕ್ಷಣ ಸಂರಕ್ಷಣೆ ಯ ಜ್ಞ ಯೋಜನೆ ಅಂಗವಾಗಿ ಶಿಕ್ಷಕ-ರಕ್ಷಕ ಸಂಘ, ಸಾರ್ವಜನಿಕರ ಸಹಕಾರದೊಂದಿಗೆ 2 ಲಕ್ಷ ರೂ.ವೆಚ್ಚದಲ್ಲಿ ಮಕ್ಕಳ ಉದ್ಯಾನ ಮತ್ತು ವಾಚನ ಬೋಧಿ ವೃಕ್ಷ ನಿರ್ಮಿಸಲಾಗಿದೆ.
ನಿವೃತ್ತ ಮುಖ್ಯಶಿಕ್ಷಕ ಟಿ.ಕೆ.ಸುರೇಶ್ ಉದ್ಘಾಟಿಸಿರು. ವಾರ್ಡ್ ಸದಸ್ಯೆ ಶಾಂತಾ ಕುಮಾರಿ, ಮುಖ್ಯ ಶಿಕ್ಷಕಿ ಶಾರ್ಲಿ ಜೋರ್ಜ್,ಪ್ರಾಂಶುಪಾಲೆ ದೀಪಾ ಎಂ.ಕೆ., ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎಂ.ಕೆ.ರವೀಂದ್ರನ್, ಉಪಾಧ್ಯಕ್ಷ ಕೆ.ಶಶಿ, ಮಾಜಿ ಅಧ್ಯಕ್ಷ ಕೆ.ಬಾಲಕೃಷ್ಣನ್, ಸ್ಟಾಫ್ ಸೆಕ್ರಟರಿ ಕೆ.ಶೈಲಜಾ, ವಿದ್ಯಾರಂಗಂ ಸಂಚಾಲಕಿ ದೀಪಾ ಎಂ. ಉಪಸ್ಥಿತರಿದ್ದರು.