ಕಾಸರಗೋಡು: ಯುವಜನ - ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಕಲಾಸಕ್ತಿ ಮೂಡಿಸಲು ಹಾಗೂ ಅವರಲ್ಲಿ ಸುಪ್ತವಾಗಿದ್ದ ಪ್ರತಿಭೆಗಳನ್ನು ಬೆಳಕಿಗೆ ತರಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯಕ್ಷಗಾನ ಕಲಾ ತರಬೇತಿಗೆ ಕಾಸರಗೋಡಿನ ಹೃದಯ ಭಾಗವಾದ ಕೋಟೆಕಣಿಯಲ್ಲಿ ಚಾಲನೆ ನೀಡಲಾಗಿದೆ.
ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ತರಬೇತಿ ಕಾರ್ಯಕ್ರವನ್ನು ಧಾರ್ಮಿಕ - ಸಾಂಸ್ಕøತಿಕ ಮುಂದಾಳು ಗಣಪತಿ ಕೋಟೆಕಣಿ ಭಾನುವಾರ ಉದ್ಘಾಟಿಸಿದರು.
ಪಡುಮಲೆ ಜಯರಾಮ ಪಾಟಾಳಿ ಅವರ ಸಮರ್ಥ ನಿರ್ದೇಶನದಲ್ಲಿ ನಡೆಯುವ ಯಕ್ಷಗಾನ ತರಬೇತಿ ಶಿಬಿರದಲ್ಲಿ ಕಾಸರಗೋಡು ಪರಿಸರದ ಮೂವತ್ತು ಮಂದಿ ಹಿರಿಯ ಕಿರಿಯ ಕಲಾವಿದರು ಭಾಗವಹಿಸುತ್ತಿದ್ದಾರೆ. ಪ್ರತಿ ಶನಿವಾರ ಅಪರಾಹ್ನ ತರಬೇತಿ ನಡೆಯಲಿದೆ ಎಂದು ಸಂಚಾಲಕ ಗುರುಪ್ರಸಾದ್ ಕೋಟೆಕಣಿ ತಿಳಿಸಿದ್ದಾರೆ.